ದೇಶದಲ್ಲಿ 41 ದಶಲಕ್ಷ ಯೂನಿಟ್​ ರಕ್ತದ ಕೊರತೆ

ಉಡುಪಿಯಲ್ಲಿ ಕರ್ಣಾಟಕ ಬ್ಯಾಂಕ್​ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಡಾ. ಎಚ್​.ಅಶೋಕ್​ ಉದ್ಘಾಟಿಸಿದರು. ಬಾಲಕೃಷ್ಣ ಹಲಸೆ, ರಮೇಶ್​ ವೈದ್ಯ, ಡಾ.ವೀಣಾ, ಡಾ.ವ್ಯಾಸರಾಜ ತಂತ್ರಿ, ಡಾ.ಹರೀಶ್ಚಂದ್ರ ಇದ್ದರು.
ಉಡುಪಿಯಲ್ಲಿ ಕರ್ಣಾಟಕ ಬ್ಯಾಂಕ್​ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಡಾ. ಎಚ್​.ಅಶೋಕ್​ ಉದ್ಘಾಟಿಸಿದರು. ಬಾಲಕೃಷ್ಣ ಹಲಸೆ, ರಮೇಶ್​ ವೈದ್ಯ, ಡಾ.ವೀಣಾ, ಡಾ.ವ್ಯಾಸರಾಜ ತಂತ್ರಿ, ಡಾ.ಹರೀಶ್ಚಂದ್ರ ಇದ್ದರು.
Published on

* ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​ ಮಾಹಿತಿ

* ರಕ್ತದಾನ ಶಿಬಿರ, ಉಚಿತ ತಪಾಸಣೆ ಉದ್ಘಾಟನೆ

ಉಡುಪಿ: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹಾಗೂ ಅಪಘಾತದಲ್ಲಿ ತೀವ್ರ ಗಾಯಗೊಂಡವರಿಗೆ ಸಕಾಲಕ್ಕೆ ರಕ್ತ ಲಭಿಸದೆ ಮೃತರಾಗುತ್ತಿದ್ದಾರೆ. ಅಮೂಲ್ಯವಾಗಿರುವ ಜೀವ ಉಳಿಸಲು ರಕ್ತದಾನ ಅತಿ ಅಗತ್ಯ. ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯೂನಿಟ್​ನಷ್ಟು ರಕ್ತದ ಕೊರತೆ ಎದುರಾಗುತ್ತಿದೆ. ಹೀಗಾಗಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​ ತಿಳಿಸಿದರು.
ಉಡುಪಿಯ ಅಂಬಾಗಿಲುನಲ್ಲಿರುವ ಕರ್ಣಾಟಕ ಬ್ಯಾಂಕ್​ನ ವಲಯ ಕಚೇರಿಯಲ್ಲಿ ಕರ್ಣಾಟಕ ಬ್ಯಾಂಕ್​ನ 102ನೇ ಸಂಸ್ಥಾಪಕರ ದಿನಾಚರಣೆ ನಿಮಿತ್ತ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಮತ್ತು ಜಿಲ್ಲಾ ಆಸ್ಪತ್ರೆಯ ಎನ್​ಸಿಡಿ ವಿಭಾಗ ಮತ್ತು ಗಾಂಧಿ ಆಸ್ಪತ್ರೆಯ ಸಹಕಾರದಲ್ಲಿ ಬುಧವಾರ (ಫೆ.18) ಆಯೋಜಿಸಿದ್ದ ವೈದ್ಯಕಿಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಅಗತ್ಯ

ಕರ್ನಾಟಕ ಬ್ಯಾಂಕ್​ನ ನಿರ್ದೇಶಕ ಬಾಲಕೃಷ್ಣ ಹಲಸೆ ಮಾತನಾಡಿ, ಇಂತಹ ರಕ್ತದಾನ ಶಿಬಿರಗಳಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು. ಅದರಿಂದ ಅಗತ್ಯ ಇದ್ದವರಿಗೆ ರಕ್ತ ನೀಡಲು ಸಹಕಾರಿಯಾಗುತ್ತದೆ. ಇಂತಹ ಸಾಮಾಜಿಕ ಕಾರ್ಯದಲ್ಲಿ ಬ್ಯಾಂಕ್​ನೊಂದಿಗೆ ಕೈ ಜೋಡಿಸಬೇಕು ಎಂದರು.

ನಿರಂತರ ಶಿಬಿರ

ಬ್ಯಾಂಕ್​ನ ಸಹಾಯಕ ಮಹಾಪ್ರಬಂಧಕ ಮತ್ತು ವಲಯ ಮಖ್ಯಸ್ಥ ರಮೇಶ್​ ವೈದ್ಯ ಮಾತನಾಡಿ, ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಅಗತ್ಯವಿದ್ದಾಗ ನಾವು ಬ್ಲಡ್​ ಬ್ಯಾಂಕ್​ನ ಮೊರೆ ಹೋಗುತ್ತೇವೆ. ಆದರೆ, ಅಲ್ಲಿಯೇ ರಕ್ತ ಸಿಗದಿದ್ದರೆ ತೊಂದೆಯಾಗುತ್ತದೆ. ಹೀಗಾಗಿ ರಕ್ತದಾನದ ಮೂಲಕ ಇನ್ನೊಬ್ಬರ ಜೀವ ಉಳಿಸುವ ಕಾರ್ಯ ಮಾಡೋಣ. ಬ್ಯಾಂಕ್​ ವತಿಯಿಂದ ಎರಡು ವರ್ಷದಿಂದ ರಕ್ತದಾನ ಮತ್ತು ಆರೋಗ್ಯ ಶಿಬಿರ ಆಯೋಜಿಸುತ್ತಿದ್ದು ಮುಂದಿನ ದಿನಗಳಲ್ಲಿ ಹಲವು ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾ, "ರಕ್ತದಾನದಲ್ಲಿ ಜನರ ಪಾತ್ರ' ಕುರಿತು ಉಪನ್ಯಾಸ ನೀಡಿದರು. ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ ಮಾತನಾಡಿದರು. 
ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ದಂತ ತಪಾಸಣೆ, ಇಸಿಜಿ, ಎಚ್​ಬಿ, ರಕ್ತದ ಗುಂಪು ಪರೀೆ ಮಾಡಲಾಯಿತು. ಬ್ಯಾಂಕ್​ನ ಗ್ರಾಹಕರು, ನೌಕರರು ಹಾಗೂ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು. ಕರ್ಣಾಟಕ ಬ್ಯಾಂಕ್​ನ ಮುಖ್ಯ ಪ್ರಭಂದಕ ಸುಬ್ರಹ್ಮಣ್ಯ ಬಾರ್ವೆ ಕಾರ್ಯಕ್ರಮ ನಿರ್ವಹಿಸಿದರು.
"

ಜನಸಾಮಾನ್ಯರಲ್ಲಿ ರಕ್ತದಾನದ ಕುರಿತಾಗಿ ತಪ್ಪು ಕಲ್ಪನೆಗಳಿದ್ದು ಅದನ್ನು ನಿವಾರಿಸಬೇಕಿದೆ. ಹೆಚ್ಚು ಜನರು ಸೇರುವ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಬೇಕು. ತನ್ಮೂಲಕ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ. ತಮಗೂ ಮುಂದೊಂದು ದಿನ ರಕ್ತ ಬೇಕಾಗುತ್ತದೆ ಎಂಬ ಸತ್ಯ ಜನರಿಗೂ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net