ಕರಾವಳಿ ಕಾವಲು ಪೋಲಿಸ್​ ಕಚೇರಿ ಆವರಣದಲ್ಲಿ ರಕ್ತದಾನ ಶಿಬಿರ

ಶಾಸಕ ಯಶ್​ಪಾಲ್​ ಸುವರ್ಣ ಬೃಹತ್​ ರಕ್ತದಾನ ಶಿಬಿರ ಉದ್ಘಾಟಿಸಿದರು.
ಶಾಸಕ ಯಶ್​ಪಾಲ್​ ಸುವರ್ಣ ಬೃಹತ್​ ರಕ್ತದಾನ ಶಿಬಿರ ಉದ್ಘಾಟಿಸಿದರು.
Published on
ಉಡುಪಿ: ರಾಜ್ಯದಲ್ಲಿ ಅತೀಹೆಚ್ಚು ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಉಡುಪಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಬಹಳಷ್ಟು ಕಾಳಜಿ ವಹಿಸಲಾಗುತ್ತಿದ್ದು, ಸರ್ಕಾರದ ಇಲಾಖೆಗಳು ಕೈಜೋಡಿಸುತ್ತಿರುವುದು ಶ್ಲಾನೀಯ ಕಾರ್ಯ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಗುರುವಾರ ಮಲ್ಪೆ ಬಂದರು ಕರಾವಳಿ ಕಾವಲು ಪೋಲಿಸ್​ ಅಧೀಕ್ಷಕರ ಕಚೇರಿ ಆವರಣದಲ್ಲಿ ಮೀನುಗಾರಿಕಾ ಇಲಾಖೆ, ಮಲ್ಪೆ ಕರಾವಳಿ ಕಾವಲು ಪೋಲಿಸ್​, ಮಲ್ಪೆ ಮೀನುಗಾರರ ಸಂ, ಮಲ್ಪೆ ಬಂದರು ಸಹಕಾರಿ ನೌಕರರ ಸಂ, ಜಿಲ್ಲಾ ಆಸ್ಪತ್ರೆ ರಕ್ತನಿಧಿ, ಮಣಿಪಾಲ ಕೆಎಂಸಿ ರಕ್ತನಿಧಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಯಂಪ್ರೇರಿತ ಬೃಹತ್​ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್​, ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ, ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ. ಗಣೇಶ್​ ಮೋಹನ್​, ಮಲ್ಪೆ ಬಂದರು ಸಹಕಾರಿ ನೌಕರರ ಸಂದ ಅಧ್ಯಕ್ಷ ರಾಮ ಸುವರ್ಣ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಕರಾವಳಿ ಕಾವಲು ಪೋಲಿಸ್​ ಪಡೆಯ ಎಎಸ್​ಐ ಭಾಸ್ಕರ್​ ಶೆಟ್ಟಿಗಾರ್​ ಸ್ವಾಗತಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net