ನಾಡಿಗೆ, ದೇಶಕ್ಕೆ ಶ್ರಾವಣ ಶುಭತರಲಿ

ನವದೆಹಲಿಯಲ್ಲಿ ಚಾತುರ್ಮಾಸ್ಯ ನಿರತ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಶ್ರೀಗಳಿಂದ ಬಿ.ಎಲ್​. ಸಂತೋಷ್​, ಬಾನ್ಸುರಿ ಸ್ವರಾಜ್​, ಅನಿಲ್​ ಶಮಾರ್, ರಾಜ್​ಬಬ್ಬರ್​ ಅವರು ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
ನವದೆಹಲಿಯಲ್ಲಿ ಚಾತುರ್ಮಾಸ್ಯ ನಿರತ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಶ್ರೀಗಳಿಂದ ಬಿ.ಎಲ್​. ಸಂತೋಷ್​, ಬಾನ್ಸುರಿ ಸ್ವರಾಜ್​, ಅನಿಲ್​ ಶಮಾರ್, ರಾಜ್​ಬಬ್ಬರ್​ ಅವರು ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
Published on

* ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಚನ

* ನವದೆಹಲಿಯ ಗುರುಕುಲಕ್ಕೆ ಬಿ.ಎಲ್​. ಸಂತೋಷ್​ ಭೇಟಿ

ಉಡುಪಿ: ಶ್ರಾವಣ ಮಾಸದ ಶುಭ ಶುಕ್ರವಾರವಾದ ಈದಿನ ವಿಶೇಷವಾಗಿದೆ. ಹಯಗ್ರೀವ ಜಯಂತಿ, ಸಂಸ್ಕೃತ ದಿನಾಚರಣೆ ಹಾಗೂ ರಕ್ಷಾಬಂಧನದ ಪವಿತ್ರವಾದ ದಿನ. ನಾಡಿನ ಸಮಸ್ತರಿಗೂ ಒಳ್ಳೆಯದಾಗಲಿ, ದೇಶಕ್ಕೆ ಒಳಿತಾಗಲಿ ಎಂದು ನವದೆಹಲಿಯಲ್ಲಿ ಚಾತುರ್ಮಾಸ್ಯ ನಿರತ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.
ಶುಕ್ರವಾರ (ಆ.28) ಬೆಳಗ್ಗೆ ನವದೆಹಲಿಯ ವೇದವ್ಯಾಸ ಗುರುಕುಲಕ್ಕೆ ಭೇಟಿ ನೀಡಿದ್ದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್​. ಸಂತೋಷ್​, ದೆಹಲಿಯ ಸಂಸತ್​ ಸದಸ್ಯೆ ಬಾನ್ಸುರಿ ಸ್ವರಾಜ್​ (ದಿ.ಸುಷ್ಮಾ ಸ್ವರಾಜ್​ ಪುತ್ರಿ), ಶಾಸಕ ಅನಿಲ್​ ಶಮಾರ್, ಬಿಜೆಪಿಯ ಈಶಾನ್ಯ ಭಾರತದ ಸಂಯೋಜಕ, ಉದ್ಯಮಿ ರಾಜ್​ಬಬ್ಬರ್​ ಅವರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಶ್ರೀಗಳು ಹರಸಿದರು.
ಗುರುಕುಲದಲ್ಲಿರುವ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದ ಜನನಾಯಕರು, ಶ್ರೀಗಳೊಂದಿಗೆ ವಿವಿಧ ವಿಷಯ ಹಾಗೂ ವಿಚಾರಗಳ ಕುರಿತಾಗಿ ಸುದೀರ್ಘ ಸಮಾಲೋಚನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net