ಬಿಜೆಪಿ ಎಸ್​ಟಿ ಮೋರ್ಚಾದಿಂದ 'ಶಿವಾಜಿ ಸಂಗಮ' ಮಾ.15ಕ್ಕೆ

ಉಡುಪಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸುಮಲತಾ ಮಾಹಿತಿ ನೀಡಿದರು. ನವೀನ್​ ನಾಯಕ್​, ಸುಗುಣಾ ನಾಯಕ್​, ವಿನಯ್​, ರಾಹುಲ್​ ನಾಯಕ್​ ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸುಮಲತಾ ಮಾಹಿತಿ ನೀಡಿದರು. ನವೀನ್​ ನಾಯಕ್​, ಸುಗುಣಾ ನಾಯಕ್​, ವಿನಯ್​, ರಾಹುಲ್​ ನಾಯಕ್​ ಇದ್ದರು.
Published on

* ಉಡುಪಿ ಅಧ್ಯಕ್ಷೆ ಸುಮಲತಾ ಮಾಹಿತಿ

* 'ಛತ್ರಪತಿ ಶಿವಾಜಿ' ನಾಟಕ ಪ್ರದರ್ಶನ

ಉಡುಪಿ: ಬಿಜೆಪಿ ಉಡುಪಿ ನಗರ ಎಸ್​ಟಿ ಮೋರ್ಚಾದ ವತಿಯಿಂದ  ಕುಂಜಿಬೆಟ್ಟುವಿನಲ್ಲಿರುವ ಬಿಜೆಪಿ ಕಚೇರಿ ಮುಂಭಾಗದ ಮೈದಾನದಲ್ಲಿ ಮಾ.15ರಂದು ಸಂಜೆ 4:30ಕ್ಕೆ ಮರಾಠಿ ಸಂಸ್ಕೃತಿ ಹಾಗೂ ಪರಂಪರೆ ಅನಾವರಣಗೊಳಿಸುವ 'ಶಿವಾಜಿ ಸಂಗಮ' ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೋರ್ಚಾ ಅಧ್ಯಕ್ಷೆ ಸುಮಲತಾ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಮಾ.14) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮರಾಠಿ ಸಂಸ್ಕೃತಿಯ ಹಾಗೂ ಪರಂಪರೆಯ ಅನಾವರಣಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ತುಳು ನಾಟಕ ಪ್ರದರ್ಶನ

ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಉದ್ಘಾಟಿಸಲಿದ್ದಾರೆ. ಉಡುಪಿ ಸಂಸದ ಕೋಟ ಶ್ರೀನಿವಾಸ್​ ಪೂಜಾರಿ, ಮಂಗಳೂರು ಸಂಸದ ಬ್ರಿಜೇಶ್​ ಚೌಟ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಉಡುಪಿ ನಗರ ಅಧ್ಯಕ್ಷ ದಿನೇಶ್​ ಅಮೀನ್​ ಪಾಲ್ಗೊಳ್ಳಲಿದ್ದಾರೆ. ಪ್ರಕಾಶ್​ ಮಲ್ಪೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮರಾಠಿ ಸಮಾಜದ ಎಸ್​ಎಸ್​ಎಲ್​ಸಿ, ಪಿಯುಸಿಯ ಸಾಧಕ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ಹತ್ತರಕಟ್ಟೆಯ 18 ಗುರಿಕಾರರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಮುದಾಯದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಜಯಕುಮಾರ್​ ಕೋಡಿಯಾಲಬೈಲ್​ ನಿರ್ದೇಶನದಲ್ಲಿ 'ಛತ್ರಪತಿ ಶಿವಾಜಿ' ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೋರ್ಚಾ ಉಪಾಧ್ಯಕ್ಷ ನವೀನ್​ ನಾಯಕ್​, ಪ್ರಧಾನ ಕಾರ್ಯದರ್ಶಿ ಸುಗುಣಾ ನಾಯಕ್​, ಕಾರ್ಯದರ್ಶಿ ವಿನಯ್​, ಪದಾಧಿಕಾರಿ ರಾಹುಲ್​ ನಾಯಕ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net