ತೆರಿಗೆ ದುರ್ಬಳಕೆ ಪ್ರಕರಣ; ನ್ಯಾಯಾಂಗ ತನಿಖೆಯಾಗಲಿ

ಉಡುಪಿ ನಗರಸಭೆಯಲ್ಲಿ ನಡೆದ ತೆರಿಗೆ ದುರುಪಯೋಗ ಪ್ರಕರಣವನ್ನು ತನಿಖೆ ನಡೆಸುವಂತೆ ಆಗ್ರಹಿಸಿ ದಿನೇಶ್​ ಅಮೀನ್​ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು. ಕಿರಣಕುಮಾರ್​, ಜಗದೀಶ್​ ಕಪ್ಪೆಟ್ಟು, ರಶ್ಮಿತಾ ಶೆಟ್ಟಿ, ರಜಿನಿ ಹೆಬ್ಬಾರ್​, ಗಿರೀಶ್​ ಅಂಚನ್​, ಬಾಲಕೃಷ್ಣ ಶೆಟ್ಟಿ, ಸಂತೋಷ್​ ನಿಟ್ಟೂರು. ಟಿ.ಜಿ. ಹೆಗ್ಡೆ, ಅಶೋಕ್​ ನಾಯಕ್​ ಇತರರಿದ್ದರು.
ಉಡುಪಿ ನಗರಸಭೆಯಲ್ಲಿ ನಡೆದ ತೆರಿಗೆ ದುರುಪಯೋಗ ಪ್ರಕರಣವನ್ನು ತನಿಖೆ ನಡೆಸುವಂತೆ ಆಗ್ರಹಿಸಿ ದಿನೇಶ್​ ಅಮೀನ್​ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು. ಕಿರಣಕುಮಾರ್​, ಜಗದೀಶ್​ ಕಪ್ಪೆಟ್ಟು, ರಶ್ಮಿತಾ ಶೆಟ್ಟಿ, ರಜಿನಿ ಹೆಬ್ಬಾರ್​, ಗಿರೀಶ್​ ಅಂಚನ್​, ಬಾಲಕೃಷ್ಣ ಶೆಟ್ಟಿ, ಸಂತೋಷ್​ ನಿಟ್ಟೂರು. ಟಿ.ಜಿ. ಹೆಗ್ಡೆ, ಅಶೋಕ್​ ನಾಯಕ್​ ಇತರರಿದ್ದರು.
Published on

* ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್​ ಒತ್ತಾಯ

* ಜಿಲ್ಲಾಧಿಕಾರಿ ಸ್ವರೂಪಾಗೆ ನಿಯೋಗ ಮನವಿ

ಉಡುಪಿ: ಉಡುಪಿ ನಗರಸಭೆಗೆ ಗ್ರಾಹಕರು ಪಾವತಿ ಮಾಡಿದ್ದ ತೆರಿಗೆ ಹಣದ ದುರ್ಬಳಕೆ ಹಾಗೂ ರಸೀದಿಯಲ್ಲಿ ನಡೆದ ಅಕ್ರಮ ವ್ಯವಹಾರವನ್ನು ಸಮಗ್ರವಾಗಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್​ ಅಮೀನ್​ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಒತ್ತಾಯಿಸಿದರು.
ಬಿಜೆಪಿ ಉಡುಪಿ ನಗರ ನಿಯೋಗದ ನೇತೃತ್ವದಲ್ಲಿ ಬುಧವಾರ (ಫೆ.25) ಜಿಲ್ಲಾಡಳಿತಕ್ಕೆ ತೆರಳಿ ಮನವಿ ಸಲ್ಲಿಸಿ ಮಾತನಾಡಿದರು.

ನಾಗರಿಕರಿಗೆ ಗೊಂದಲ, ಸಂಶಯ

ಉಡುಪಿ ನಗರಸಭೆಯಲ್ಲಿ ತೆರಿಗೆ ಹಣ ವಂಚನೆ ಮಾಡಿರುವ ಕುರಿತು ಪೌರಾಯುಕ್ತರು ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇಲ್ನೋಟಕ್ಕೆ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಆರೋಪಿಗಳೆಂದು ಕಂಡು ಬಂದಿರುವ ನಾಲ್ವರನ್ನು ಬಂಧಿಸಲಾಗಿದೆ. ತೆರಿಗೆ ಪಾವತಿ ಚಲನ್​ಗಳಿಗೆ ಬ್ಯಾಂಕ್​ನ ನಕಲಿ ಸೀಲ್​ ಬಳಸಿರುವ ವಿಚಾರ ತಿಳಿದುಬಂದಿದೆ. ಇದು ಗೊಂದಲ ಹಾಗೂ ಸಂಶಯ ಮೂಡಿಸುತ್ತಿದ್ದು, ನಾಗರಿಕರು ತಲೆ ತಗ್ಗಿಸುವಂತಾಗಿದೆ ಎಂದರು.
ನಿಯೋಗದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿರಣಕುಮಾರ್​, ನಗರ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್​ ಕಪ್ಪೆಟ್ಟು, ರಶ್ಮಿತಾ ಶೆಟ್ಟಿ, ನಗರಸಭೆಯ ನಿಕಟಪೂರ್ವ ಅಧ್ಯೆ ರಜಿನಿ ಹೆಬ್ಬಾರ್​, ಮಾಜಿ ಸದಸ್ಯರಾದ ಗಿರೀಶ್​ ಅಂಚನ್​, ಬಾಲಕೃಷ್ಣ ಶೆಟ್ಟಿ, ಸಂತೋಷ್​ ನಿಟ್ಟೂರು. ಟಿ.ಜಿ. ಹೆಗ್ಡೆ, ಅಶೋಕ್​ ನಾಯಕ್​ ಇತರರಿದ್ದರು. 
"

ಉಡುಪಿ ನಗರಸಭೆ ತನ್ನದೇ ಆದ ಘನತೆ, ಗೌರವ ಹಾಗೂ ಹಿರಿಮೆಯಿದೆ. ಇಲ್ಲಿ ತೆರಿಗೆ ಹಣ ದುರ್ಬಳಕೆ ಮಾಡಿರುವುದು ತೆರಿಗೆದಾರರು ಆತಂಕಕ್ಕೆ ಒಳಗಾಗುವಂತಾಗಿದೆ. ಈ ಪ್ರಕರಣವು ಗಂಭೀರವಾಗಿದ್ದು, ಭಾಗಿಯಾಗಿರುವ ಬ್ಯಾಂಕ್​ನ ಹಾಗೂ ನಗರಸಭೆಯ ನೌಕರರು ಮತ್ತು ಅಧಿಕಾರಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಒಳಪಡಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net