ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಲಿಯೋ ಅವರನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಲೆಸ್ಲಿ ಸಿ. ಡಿಸೋಜಾ ಭೇಟಿಯಾಗಿ ಆಶೀರ್ವಾದ ಪಡೆದರು.
Published on:
Copied
Follow Us
* ಧರ್ಮಪ್ರಾಂತ್ಯದ ಪಾಲಕಿ ಮಿಲಾಗ್ರಿಸ್ ಮಾತೆಯ ಪ್ರತಿಮೆ ನೀಡಿ ಗೌರವ
ಉಡುಪಿ: ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷ ಅತಿ ವಂ.ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕ್ರೈಸ್ತ ಜಗದ್ಗುರು ಪೋಪ್ ಲಿಯೋ- XIV ಅವರನ್ನು ವ್ಯಾಟಿಕನ್ ನಗರದಲ್ಲಿ ಗುರುವಾರ (ಸೆ.10) ಭೇಟಿಯಾಗಿ ಆಶೀರ್ವಾದ ಪಡೆದರು.
ವಿಶ್ವದ ಎಲ್ಲ ನೂತನ ಬಿಷಪ್ಗಳನ್ನು ಭೇಟಿಯಾದ ಪೋಪ್ ಲಿಯೋ, ಬಳಿಕ ಪ್ರತ್ಯೇಕವಾಗಿ ಪ್ರತಿ ಧರ್ಮಪ್ರಾಂತ್ಯದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದರು.
ಉಡುಪಿ ಅಧ್ಯಕ್ಷ ಬಿಷಪ್ ಡಾ.ಲೆಸ್ಲಿ ಅವರು ಧರ್ಮಪ್ರಾಂತ್ಯದ ಪರವಾಗಿ ಪೋಪ್ ಅವರಿಗೆ ಶಾಲು ಹಾಗೂ ಧರ್ಮಪ್ರಾಂತ್ಯದ ಪಾಲಕಿಯಾದ ಮಿಲಾಗ್ರಿಸ್ ಮಾತೆಯ ಪ್ರತಿಮೆ ನೀಡಿ ಗೌರವಿಸಿ ಉಡುಪಿ ಜಿಲ್ಲೆಯ ಪರವಾಗಿ ಶುಭಾಶಯ ಕೋರಿದರು.
ಉಡುಪಿ ಧರ್ಮಪ್ರಾಂತ್ಯದ ಮಾಹಿತಿ ಪಡೆದ ಪೋಪ್, ಉಡುಪಿ ಹಾಗೂ ಭಾರತದ ಧರ್ಮಸಭೆಗೆ ತಮ್ಮ ಆಶೀರ್ವಾದ ತಿಳಿಸಿದರು. ಲೆಸ್ಲಿ ಅವರು ಈ ವೇಳೆ ಪವಿತ್ರ ಧರ್ಮಸಭೆ ಹಾಗೂ ಪೋಪ್ ಲಿಯೋ ಅವರಿಗೆ ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ವಿಶ್ವಾಸಿಗಳ ಪರವಾಗಿ ಪ್ರಾರ್ಥನೆಯ ಭರವಸೆ ನೀಡಿದರು.