ಪಂಡಿತ್​ ದೀನದಯಾಳ್​ ತತ್ವಾದರ್ಶ ಪ್ರೇರಣಾದಾಯಕ : ಕುತ್ಯಾರು ನವೀನ್​ ಶೆಟ್ಟಿ

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾರತೀಯ ಜನಸಂಘದ ಮಾಜಿ ಅಧ್ಯಕ್ಷ ಪಂಡಿತ್​ ದೀನದಯಾಳ್​ ಉಪಾಧ್ಯಾಯ ಜನ್ಮ ದಿನಾಚರಣೆ
Dindayal birthday bjp
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಜನಸಂಘದ ಮಾಜಿ ಅಧ್ಯಕ್ಷ ಪಂಡಿತ್​ ದೀನದಯಾಳ್​ ಉಪಾಧ್ಯಾಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
Published on: 

ಉಡುಪಿ: ದೇಶಕ್ಕಾಗಿ, ಪಕ್ಷಕ್ಕಾಗಿ ಜೀವನವನ್ನೇ ಸಮರ್ಪಿಸಿದ ದಿವ್ಯ ಚೇತನ ಪಂಡಿತ್​ ದೀನದಯಾಳ್​ ಉಪಾಧ್ಯಾಯ. ಅವರ ತ್ಯಾಗ, ಬಲಿದಾನ, ತತ್ವಾದರ್ಶ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಹೇಳಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಭಾರತೀಯ ಜನಸಂಘದ ಮಾಜಿ ಅಧ್ಯಕ್ಷ ಪಂಡಿತ್​ ದೀನದಯಾಳ್​ ಉಪಾಧ್ಯಾಯ ಜನ್ಮ ದಿನಾಚರಣೆ ಅಧ್ಯಕ್ಷತೆ ವಹಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.

ಶ್ಯಾಮ ಪ್ರಸಾದ್​ ಮುಖರ್ಜಿ ಮತ್ತು ಪಂಡಿತ್​ ದೀನ ದಯಾಳ್​ ಉಪಾಧ್ಯಾಯ ಅವರ ಕನಸು ನನಸಾಗಿದೆ. ಸಂವಿಧಾನದ 370ನೇ ವಿಧಿ ರದ್ಧತಿಯಿಂದಾಗಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಪಂಡಿತ್​ ಜೀ ಅಂತ್ಯೋದಯ ಪರಿಕಲ್ಪನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳಲ್ಲಿ ಪ್ರತಿಫಲಿಸುತ್ತಿದೆ. ಪಕ್ಷದ ಕಾರ್ಯಕರ್ತರು ಸೇವಾ ಮನೋಭಾವನೆಯಿಂದ ಕೆಲಸ ಮಾಡುವುದು ಪಕ್ಷ ಕಟ್ಟಲು ಶ್ರಮಿಸಿದ ಹಿರಿಯರಿಗೆ ಸಲ್ಲಿಸುವ ಗೌರವ ಎಂದರು.

ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್​ ಮಾತನಾಡಿ, ಪಂಡಿತ್​ ದೀನದಯಾಳ್​ ಉಪಾಧ್ಯಾಯ ಹತ್ಯೆ ಇಂದಿಗೂ ನಿಗೂಢವಾಗಿದೆ. ಜನಸಂದ ರಾಷ್ಟ್ರೀಯ ಅಧ್ಯಕ್ಷರ ಕೊಲೆ ತನಿಖೆಯನ್ನೇ ಕಾಂಗ್ರೆಸ್​ ಸರ್ಕಾರ ಸರಿಯಾಗಿ ಮಾಡಿಲ್ಲ. ಕೊಲೆಗಾರಿಗೆ ಶಿೆಯೂ ಆಗಿಲ್ಲ. ಇದು ಕಾಂಗ್ರೆಸ್​ ನೈಜ ಮುಖ ಎಂದು ಹೇಳಿದರು.

ಬಿಜೆಪಿ ಮಂಗಳೂರು ವಿಭಾಗ ಎಸ್​ಐಆರ್​ ಸಂಚಾಲಕ ಕೆ.ಉದಯ ಕುಮಾರ್​ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಟ್ಟಾರ್​ ರತ್ನಾಕರ ಹೆಗ್ಡೆ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಎಸ್​.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗಿರೀಶ್​ ಎಂ. ಅಂಚನ್​ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ, ಶ್ರೀಕಾಂತ್​ ನಾಯಕ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net