ಬಾಪೂಜಿ ಅಹಿಂಸಾ ತತ್ವ ವಿಶ್ವಮಾನ್ಯ

ಬ್ರಹ್ಮಗಿರಿಯ ಕಾಂಗ್ರೆಸ್​ ಭವನದಲ್ಲಿ ಮಹಾತ್ಮ ಗಾಂಧಿ ಅವರ 157ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ 122ನೇ ಜನ್ಮದಿನಾಚರಣೆ
gandhi jayanthi
ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು ಮಹಾತ್ಮ ಗಾಂಧಿ ಹಾಗೂ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
Published on: 

ಉಡುಪಿ: ಬಾಪೂಜಿ ಅಹಿಂಸಾ ತತ್ವ ವಿಶ್ವಮಾನ್ಯವಾಗಿದೆ. ಅವರ ಸರಳತೆ, ಸತ್ಯ ಮತ್ತು ನ್ಯಾಯ ಮಾರ್ಗವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಅಧ್ಯಾಪಕ, ಉಡುಪಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಪ್ರಧಾನ ಕಾರ್ಯದರ್ಶಿ ದಯಾನಂದ್​ ಕಿದಿಯೂರು ಹೇಳಿದರು.

ಬ್ರಹ್ಮಗಿರಿಯ ಕಾಂಗ್ರೆಸ್​ ಭವನದಲ್ಲಿ ಮಹಾತ್ಮ ಗಾಂಧಿ ಅವರ 157ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ 122ನೇ ಜನ್ಮದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್​ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷರಾದ ರಮೇಶ್​ ಕಾಂಚನ್​ ,ಜಿಲ್ಲಾ ಮಹಿಳಾ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್​, ಮಾಜಿ ಸಚಿವ ವಿನಯ್​ ಕುಮಾರ್​ ಸೊರಕೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್​, ಮಾಜಿ ಉಡುಪಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ನಾಯಕರಾದ ದಿನೇಶ್​ ಪುತ್ರನ್​, ಮಹಾಬಲ ಕುಂದರ್​, ನರಸಿಂಹಮೂರ್ತಿ, ಭುಜಂಗ ಶೆಟ್ಟಿ, ಕೇಶವ ಕೋಟ್ಯಾನ್​, ಹರೀಶ್​ ಶೆಟ್ಟಿ ಪಾಂಗಳ, ಕುಶಲ್​ ಶೆಟ್ಟಿ, ಭಾಸ್ಕರ್​ ರಾವ್​ ಕಿದಿಯೂರು, ವಿಶ್ವಾಸ್​ ಅಮೀನ್​, ಮೀನಾಕ್ಷಿ ಮಾಧವ ಬನ್ನಂಜೆ, ಮಮತಾ ಶೆಟ್ಟಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಜಯಶ್ರೀ ಶೇಟ್​, ಸುದರ್ಶನ್​ ಪಡುಕರೆ ಹಾಗೂ ತಾರಾನಾಥ್​ ಸುವರ್ಣ ಅವರಿಂದ ಗಾಂಧಿಸ್ಮ$ತಿ ಸಂಗೀತ ಕಛೇರಿ ನಡೆಯಿತು. ಬ್ಲಾಕ್​ ಕಾಂಗ್ರೆಸ್​ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್​ ಕುಮಾರ್​ ಮಂಚಿ ಕಾರ್ಯಕ್ರಮ ನಿರೂಪಿಸಿದರು. ಭರತ್​ ಕುಮಾರ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net