ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಅಪಘಾತ
ಅಪಘಾತ
Published on
ಬಂಟ್ವಾಳ: ಫರಂಗಿಪೇಟೆ ಸಮೀಪ ಕಡೆಗೋಳಿ ಎಂಬಲ್ಲಿ ಬುಧವಾರ ಬೆಳಗ್ಗೆ ಸ್ನೇಹಿತನನ್ನು ಬಿಟ್ಟು ಬರಲು ಬಂಟ್ವಾಳದ ಅಮ್ಮಾಡಿ ಎಂಬಲ್ಲಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ವಾಹನ ಡಿಕ್ಕಿಯಾಗಿ ಬೈಕ್ ಸವಾರ, ಬಜ್ಪೆ ಕೈಕಂಬ ನಿವಾಸಿ ಅಭಿಜಿತ್(28) ಮೃತಪಟ್ಟಿದ್ದಾರೆ. ಸಹಸವಾರ ಸಂದೀಪ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಭಿಜಿತ್ ಮಂಗಳೂರಿನಲ್ಲಿ ಉದ್ಯೋಗ ಆರಂಭಿಸಲಿದ್ದರು. ಸ್ನೇಹಿತ ಸಂದೀಪ್‌ನನ್ನು ಬಿಟ್ಟುಬರಲು ಅಮ್ಮಾಡಿಗೆ ತೆರಳುತ್ತಿದ್ದ ವೇಳೆ ಮುಂಜಾನೆ 3ರ ವೇಳೆಗೆ ಅಪರಿಚಿತ ವಾಹನ ಹಿಂದಿನಿಂದ ಡಿಕ್ಕಿಯಾಗಿ ಪರಾರಿಯಾಗಿದೆ. ಡಿಕ್ಕಿ ರಭಸಕ್ಕೆ ಬೈಕ್ ಉರುಳಿದ್ದು ಅಭಿಜಿತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net