ಶಾಲಾ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು

ACCIDENT
ACCIDENT
Published on

ಕಾಸರಗೋಡು: ಪೊವ್ವಲ್ ಮಾಸ್ತಿಕುಂಡ್ ಎಂಬಲ್ಲಿ ಗುರುವಾರ ಶಾಲಾ ವಾಹನ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ, ಗಾಳಿಮುಖ ಗೋಳಿತ್ತಡಿ ನಿವಾಸಿ ಷಮ್ಮಾಸ್ ಅಬ್ದುಲ್ಲ(25) ಮೃತಪಟ್ಟಿದ್ದಾರೆ.

ಕೋಯಿಕ್ಕೋಡ್‌ನಲ್ಲಿ ಜ್ಯೂಸ್ ಅಂಗಡಿಯೊಂದರಲ್ಲಿ ನೌಕರನಾಗಿದ್ದ ಷಮ್ಮಾಸ್ ಅಬ್ದುಲ್ಲ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೈಕ್‌ನಿಂದ ಬಿದ್ದ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net