ಟೆಂಪೋ ಡಿಕ್ಕಿ ಬೈಕ್​ ಸವಾರ ಮೃತ್ಯು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಉಡುಪಿ: ಮಣಿಪಾಲ ಅತ್ರಾಡಿಯ ಕಬ್ಯಾಡಿ ಬಳಿ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಹೆರ್ಗ ನಿವಾಸಿ ಭಾಸ್ಕರ್​ ನಾಯಕ್​ (70 ) ಮೃತರು. ಆತ್ರಾಡಿಯಿಂದ ಮೂಡುಬೆಳ್ಳೆಗೆ ಟೆಂಪೋ ಮತ್ತು ಬೈಕ್​ ಮಧ್ಯೆ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬೈಕ್​ ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದು, ಜೀವ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಮಣಿಪಾಲದ ಆಸ್ಪತ್ರೆಗೆ ಸೇರಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net