

ಕಾರ್ಕಳ: ಇಲ್ಲಿನ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾಣೂರಿನ ಕುಜ್ಜಾರ್ ಗುಡ್ಡೆ ನಿವಾಸಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಸಾಣೂರಿನ ಕುಜ್ಜಾರ್ ಗುಡ್ಡೆ ನಿವಾಸಿ ವಿಘ್ನೇಶ್ ಆಚಾರ್ಯ(25) ಎಂದು ಗುರುತಿಸಲಾಗಿದೆ.
ಬೈಪಾಸ್ ಕಡೆ ತೆರಳುತ್ತಿದ್ದ ಲಾರಿ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.