ಬೈಕ್ ಅಪಘಾತ, ಇಬ್ಬರಿಗೆ ಗಾಯ

ACCIDENT
ACCIDENT
Published on

ಕುಂದಾಪುರ: ಮರವಂತೆ ಗ್ರಾಮದ ರಾಘವೇಂದ್ರ ದೇವಾಡಿಗ ಎಂಬುವರು ಬೈಕಿನಲ್ಲಿ ತ್ರಾಸಿಗೆ ತೆರಳುತ್ತಿದ್ದಾಗ ತ್ರಾಸಿ ಬೀಚ್ ಪಾರ್ಕ್ ಸಮೀಪ ರಾ.ಹೆ.-66ರಲ್ಲಿ ಬೈಂದೂರು ಕಡೆಯಿಂದ ಬಂದ ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಅಪಘಾತದಿಂದ ರಾಘವೇಂದ್ರ ಅವರಿಗೆ ಗಾಯಗಳಾಗಿವೆ. ಸಹ ಸವಾರ ಸತ್ತಾರ್ ಶಾಹುಲ್ ಹಮೀದ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net