ಪಡುಕುಡೂರು ಖಜಾನೆ ಮುಖ್ಯ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ

ಪಡುಕುಡೂರು ಖಜಾನೆ ಮುಖ್ಯರಸ್ತೆಯ ಅಭಿವದ್ಧಿ ಕಾರ್ಯಕ್ಕೆ ಶಾಸಕ ಸುನೀಲ್ ಕುಮಾರ್ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಪಡುಕುಡೂರು ಖಜಾನೆ ಮುಖ್ಯರಸ್ತೆಯ ಅಭಿವದ್ಧಿ ಕಾರ್ಯಕ್ಕೆ ಶಾಸಕ ಸುನೀಲ್ ಕುಮಾರ್ ಭಾನುವಾರ ಭೂಮಿಪೂಜೆ ನೆರವೇರಿಸಿದರು.
Published on

ಹೆಬ್ರಿ:ವರಂಗಗ್ರಾಮದ ಪಡುಕುಡೂರು ಖಜಾನೆಮುಖ್ಯರಸ್ತೆಯನ್ನು 2.50ಕೋಟಿರೂ.ವೆಚ್ಚದಲ್ಲಿಅಭಿವೃದ್ಧಿಗೊಳಿಸಲಾಗುತ್ತಿದ್ದು,ಜತೆಗೆಪಡುಕುಡೂರು ಭಾಗದಲ್ಲಿ ಈಗಾಗಲೇಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟುಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದುಶಾಸಕ ಸುನೀಲ್‌ಕುಮಾರ್ ಭರವಸೆನೀಡಿದರು.

ಪಡುಕುಡೂರುಖಜಾನೆ ಮುಖ್ಯರಸ್ತೆ ಅಭಿವೃದ್ಧಿಗೆಭಾನುವಾರ ಭೂಮಿಪೂಜೆ ನೆರವೇರಿಸಿಮಾತನಾಡಿದರು.ಪಡುಕುಡೂರುಶ್ರೀ ಭದ್ರಕಾಳಿ ದೇವಸ್ಥಾನದಅರ್ಚಕ ಸೂರಿಮಣ್ಣು ಸದಾಶಿವಉಪಾಧ್ಯಾಯ ಧಾರ್ಮಿಕ ವಿಧಿವಿಧಾನನೆರವೇರಿಸಿದರು.

ಮುಖಂಡರಾದಮುನಿಯಾಲು ದಿನೇಶ ಪೈ,ಶಂಕರಶೆಟ್ಟಿ ಪಡುಕುಡೂರು,ಸಂದೇಶಶೆಟ್ಟಿ,ಜ್ಯೋತಿ,ಹರೀಶಪೂಜಾರಿ,ಜಗದೀಶಹೆಗ್ಡೆ ಪಡುಕುಡೂರು,ಭಾಸ್ಕರಶೆಟ್ಟಿ ಪಡುಕುಡೂರು,ಪ್ರಸನ್ನಶೆಟ್ಟಿ ಜಯಲೀಲಾ,ಎಂ.ಡಿ.ಅಧಿಕಾರಿಯೂತ್ ಕ್ಲಬ್ ಅಧ್ಯಕ್ಷ ಸಂದೀಪಶೆಟ್ಟಿ,ರತ್ನಾಕರಪೂಜಾರಿ ಸಹಿತ ಪ್ರಮುಖರುಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net