ಉಡುಪಿ ತೆಂಕಪೇಟೆಯ ಲಕ್ಷ್ಮೀ ವೆಂಕಟೇಶ ದೇವರಿಗೆ ಶ್ರೀದೇವಿ-ಭೂದೇವಿ ಸಹಿತ ವಿಶೇಷ ಅಲಂಕಾರ ಮಾಡಲಾಗಿತ್ತು. ಭಜನಾ ಮಂಗಲೋತ್ಸವದ ನಿಮಿತ್ತ ಭಕ್ತರು ಉರುಳು ಸೇವೆ ಸಲ್ಲಿಸಿದರು.
Published on:
Copied
Follow Us
* ಶ್ರೀದೇವಿ-ಭೂದೇವಿ ಸಹಿತ ಲಕ್ಷ್ಮೀ ವೆಂಕಟೇಶವಿಗೆ ವಿಶೇಷ ಅಲಂಕಾರ
ಉಡುಪಿ: ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಡೆಯುತ್ತಿದ್ದ 126ನೇ ವರ್ಷದ ಭಜನಾ ಮಹೋತ್ಸವ 8 ದಿನಗಳ ಕಾಲ ಅಹೋರಾತ್ರಿ ನಡೆದು ಮಂಗಳವಾರ ಸಂಪನ್ನಗೊಂಡಿತು. ತನ್ನಿಮಿತ್ತ ಶ್ರೀದೇವಿ-ಭೂದೇವಿ ಸಹಿತ ಲಕ್ಷ್ಮೀ ವೆಂಕಟೇಶ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಭಜನಾ ಮೊಹೋತ್ಸವದ ವಿಠೋಬಾ ರುಕುಮಾಯಿ ದೇವರಿಗೆ ಆರತಿ ಬೆಳಗಿ ಮಂಗಲೋತ್ಸವಕ್ಕೆ ಚಾಲನೆ ನೀಡಲಾಯಿತು. ಅರ್ಚಕ ದಯಾಘನ್ ಭಟ್ ಪೂಜಾ ವಿಧಾನ ನೆರವೇರಿಸಿದರು.
ಶ್ರೀದೇವರ ಉತ್ಸವ ಮೂರ್ತಿಯ ಸಮ್ಮುಖದಲ್ಲಿ ನೂರಾರು ಭಕ್ತರು ಜೈ ವಿಠ್ಠಲ, ಹರಿ ವಿಠ್ಠಲ ಸ್ಮರಣೆ ಮಾಡುತ್ತ ದೇವಳದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಉರುಳು ಸೇವೆ ಸಲ್ಲಿಸಿದರು.
ಭಜನಾ ಮೊಹೋತ್ಸವದ ಅಧ್ಯಕ್ಷ ಮಟ್ಟಾರು ಸತೀಶ್ ಕಿಣಿ, ದೇವಳದ ಧರ್ಮದರ್ಶಿ ಗುಜ್ಜಾಡಿ ಪ್ರಭಾಕರ್ ನಾಯಕ್, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ದೀಪಕ್ ಭಟ್, ಗಿರೀಶ್ ಭಟ್, ವಿವೇಕಾನಂದ ಶಾನಭೋಗ್, ಭಾಸ್ಕರ್ ಶೆಣೈ, ಉಮೇಶ್ ಪೈ, ಗಣೇಶ್ ಕಿಣಿ, ನರಸಿಂಹ ಕಿಣಿ, ಪ್ರಭಾಕರ್ ಭಟ್, ಜಿಎಸ್ಬಿ ಯುವಕ ಮಂಡಳಿ ಸದಸ್ಯರು, ಭಗಿನಿ ವೃಂದ, ಮಹಿಳಾ ಮಂಡಳಿ ಸದಸ್ಯರು, ಭಜನಾ ಮಹೋತ್ಸವ ಸಮಿತಿ ಸದಸ್ಯರು ಹಾಗೂ ಊರಿನ ನಾಗರಿಕರು ಪಾಲ್ಗೊಂಡಿದ್ದರು.