

* ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ ಆಶಯ
ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ್ ಶೆಟ್ಟಿ ಕೊಂಡಾಡಿ ಅಧ್ಯಕ್ಷತೆ ವಹಿಸಿದ್ದರು.
ಪರಿಷತ್ ತಾಲೂಕು ಉಪಾಧ್ಯಕ್ಷೆ ವಜ್ರಾಕ್ಷಿ ಪಿ. ದಾಸ್, ವಲಯಗಳ ಸಂಯೋಜಕರಾದ ಪ್ರದೀಪ್ ಕುಮಾರ್, ಲತಾ ನಾಯ್ಕ್, ರೂಪಾಶ್ರೀ, ಶೋಭಾ ಪೂಜಾರಿ, ಯೋಜನೆಯ ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರಭಾವತಿ, ಸೇವಾ ನಿರತೆ ಹೇಮಾ, ಒಕ್ಕೂಟದ ಅಧ್ಯಕ್ಷೆ ಸವಿತಾ ಸಂತೋಷ್, ಒಕ್ಕೂಟದ ಪದಾಧಿಕಾರಿಗಳು ಹಾಗೂ ಭಜನಾ ಮಂಡಳಿಗಳ ಸದಸ್ಯರು ಪಾಲ್ಗೊಂಡಿದ್ದರು.
ಉಡುಪಿ ತಾಲೂಕಿನಾದ್ಯಂತ 50ಕ್ಕೂ ಅಧಿಕ ಭಜನಾ ಮಂಡಳಿಗಳ 750ಕ್ಕೂ ಹೆಚ್ಚು ಭಜಕರು ಭಜನೋತ್ಸವದ ಕುಣಿತ ಭಜನೆಯಲ್ಲಿ ಪಾಲ್ಗೊಂಡಿದ್ದರು.
ಕೆಟ್ಟ ಮನಸ್ಥಿತಿಯ ಕೆಲವರು ಯುವ ಜನತೆಯ ದಾರಿ ತಪ್ಪಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸದೃಢ ಮನಸ್ಥಿತಿಗೆ ಭಜನೆಯೊಂದೇ ಪರಿಹಾರ ಮಾರ್ಗ. ವಿದ್ಯಾರ್ಥಿ ಸಹಿತ ಎಲ್ಲ ವಯೋಮಾನದವರು ನಾಡಿನ ಭವ್ಯ ಪರಂಪರೆ ಮತ್ತು ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಹಾಗೂ ಮೌಲ್ಯಾಧಾರಿತ ಭಜನೆಗಾಗಿ ಸಮಯ ಮೀಸಲಿಡಬೇಕು. ಭಜನಾ ಸಂಸ್ಕೃತಿಯ ವೈಭವ ಮರುಕಳಿಸುವಂತಾಗಲಿ.
— ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.