ಮನೆಗಳಲ್ಲಿ ನಿತ್ಯವೂ ಆಗಲಿ ಭಗವದ್ಗೀತೆ ಅಧ್ಯಯನ

 ಜೀವನವನ್ನು ಬೆಳಗಿಸುವ ಗ್ರಂಥ ಭಗವದ್ಗೀತೆ. ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಶಕ್ತಿಯಾಗಬೇಕು. ಸ್ವಾತಂತ್ರ್ಯ ಪಡೆದ ಶತಮಾನೋತ್ಸವದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನೂ ಭಗವದ್ಗೀತೆಯ ಜ್ಞಾನವನ್ನು ಹೊಂದಿದವನಾಗಬೇಕು. ಮನೆ ಮನೆಗಳಲ್ಲಿ ನಿತ್ಯವೂ ಭಗವದ್ಗೀತೆಯ ಅಧ್ಯಯನ ಮಾಡಬೇಕು ಎಂದು ಗೀತಾಜ್ಞಾನ ಯಜ್ಞ ವೇದಿಕೆಯ ಪ್ರಧಾನ ಗುರು ಸುಬ್ರಾಯ ನಂದೋಡಿ ಕಾಸರಗೋಡು ಹೇಳಿದರು.

Published on
ಕುಂದಾಪುರ: ಜೀವನವನ್ನು ಬೆಳಗಿಸುವ ಗ್ರಂಥ ಭಗವದ್ಗೀತೆ. ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಶಕ್ತಿಯಾಗಬೇಕು. ಸ್ವಾತಂತ್ರ್ಯ ಪಡೆದ ಶತಮಾನೋತ್ಸವದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನೂ ಭಗವದ್ಗೀತೆಯ ಜ್ಞಾನವನ್ನು ಹೊಂದಿದವನಾಗಬೇಕು. ಮನೆ ಮನೆಗಳಲ್ಲಿ ನಿತ್ಯವೂ ಭಗವದ್ಗೀತೆಯ ಅಧ್ಯಯನ ಮಾಡಬೇಕು ಎಂದು ಗೀತಾಜ್ಞಾನ ಯಜ್ಞ ವೇದಿಕೆಯ ಪ್ರಧಾನ ಗುರು ಸುಬ್ರಾಯ ನಂದೋಡಿ ಕಾಸರಗೋಡು ಹೇಳಿದರು.
ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಜರುಗಿದ ಗೀತಾ ಸಂದೇಶ ಸಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲ ಶರಣ ಕುಮಾರ ಮಾತನಾಡಿ, ಭಗವದ್ಗೀತೆ ಅಮೂಲ್ಯವಾದ ಭಾರತೀಯ ತತ್ತ್ವಗಳ ಸಂಗ್ರಹವಾಗಿದ್ದು ಬಾಲ್ಯದಲ್ಲಿಯೇ ಅದನ್ನು ಅಧ್ಯಯನ ಮಾಡಬೇಕು ಎಂದರು.
ಶಾಲೆ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಉಪಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವೀಕ್ಷಾ, ಕೃಪಾಲಿ, ಮಯೂರ ಅವರು ಪಂಚಾಂಗ, ಗೀತಾ ಮಹಾತ್ಮೆ ಹಾಗೂ ಜ್ಞಾನಕಿರಣವನ್ನು ಪಠಿಸಿದರು. ವಿದ್ಯಾರ್ಥಿ ಶ್ರೀವತ್ಸ ಅಡಿಗ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net