ಬೆಟ್ಟಂಪಾಡಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು

Theft
Theft
Published on

ಪುತ್ತೂರು ಗ್ರಾಮಾಂತರ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದದಲ್ಲಿ ಸೋಮವಾರ ರಾತ್ರಿ ಕಾಣಿಕೆ ಡಬ್ಬಿ ಕಳವಾಗಿದೆ. ರಾತ್ರಿ ಸುಮಾರು 11.30ರ ವೇಳೆಗೆ ದೇವಸ್ಥಾನದ ಹೊರಾಂಗಣ ಪ್ರವೇಶಿಸಿರುವ ಕಳ್ಳನೊಬ್ಬ ದೇವಸ್ಥಾನದ ಹೊರಾಂಗಣದ ಮುಖ್ಯದ್ವಾರದ ಬಳಿಯಿದ್ದ ಕಾಣಿಕೆ ಡಬ್ಬಿ ದೋಚಿದ್ದಾನೆ.

ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಬಲ್ಲಾಳ್ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಡಬ್ಬಿಯಲ್ಲಿ ಸುಮಾರು 4500 ರೂ. ಇದ್ದಿರಬಹುದೆಂದು ಅಂದಾಜಿಸಲಾಗಿದೆ.

ಸಂಪ್ಯ ಠಾಣೆಯ ಪೊಲೀಸರು ದೇವಸ್ಥಾನದ ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಎಂಬಲ್ಲಿ ಬೈಕ್ ಕಳವಿಗೂ ಯತ್ನಿಸಿರುವುದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net