ತೆಂಕನಿಡಿಯೂರು ಕಾಲೇಜ್​ ಶೇ.97.01 ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ತೆಂಕನಿಡಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜ್​ ವಿದ್ಯಾರ್ಥಿಗಳು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ತೆಂಕನಿಡಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜ್​ ವಿದ್ಯಾರ್ಥಿಗಳು.
Published on

* ವಾಣಿಜ್ಯದಲ್ಲಿ ಆದರ್ಶ್​, ಕಲಾ ವಿಭಾಗದಲ್ಲಿ ಹನಮವ್ವ ಪ್ರಥಮ

ಉಡುಪಿ: ತಾಲೂಕಿನ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜ್​ ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.-97.01 ಫಲಿತಾಂಶ ದಾಖಲಿಸುವ ಮೂಲಕ ಗಮನ ಸೆಳೆದಿದೆ.
ವಾಣಿಜ್ಯ ವಿಭಾಗ ಶೇ.95.07 ಹಾಗೂ ಕಲಾ ವಿಭಾಗ ಶೇ.100 ಫಲಿತಾಂಶ ಸಾಧಿಸಿದೆ. ಡಿಸ್ಟಿಂಕ್ಷನ್​ನಲ್ಲಿ -12 ವಿದ್ಯಾರ್ಥಿಗಳು, ಪ್ರಥಮ 37, ದ್ವಿತೀಯ 11 ಹಾಗೂ ತೃತೀಯ ಸ್ಥಾನದಲ್ಲಿ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಷಯವಾರು ಫಲಿತಾಂಶದಲ್ಲಿ ಕನ್ನಡ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರದಲ್ಲಿ ಶೇ.100 ಸಾಧನೆ ಮಾಡಿದೆ. ಇಂಗ್ಲಿಷ್​ ಶೇ.98, ಅರ್ಥಶಾಸ್ತ್ರ ಶೇ.97 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಆದರ್ಶ್​ (589) ಪ್ರಥಮ ಸ್ಥಾನ, ಕಾರ್ತಿಕ್​ ಪೂಜಾರಿ (567) ದ್ವಿತೀಯ, ಟಿ.ವೈಷ್ಣವಿ ಪೈ (562) ತೃತೀಯ ಹಾಗೂ ಕಲಾ ವಿಭಾಗದಲ್ಲಿ ಹನಮವ್ವ (557) ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಕಾಲೇಜ್​ನ ಪ್ರಾಂಶುಪಾಲ ವಿಶ್ವನಾಥ್​ ಕೆ. ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net