ಉಷಾ ದಯಾನಂದ ಪೈಗೆ ಅತ್ಯುತ್ತಮ ಡೀಲರ್ ಪ್ರಶಸ್ತಿ

 ಡಿಕೆಎಂಯುಎಲ್ ವತಿಯಿಂದ ಅತ್ಯುತ್ತಮ ಡೀಲರ್ ಪ್ರಶಸ್ತಿಯನ್ನು ಉಷಾ ದಯಾನಂದ ಪೈ ಅವರಿಗೆ ಪ್ರದಾನಿಸಲಾಯಿತು. ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಉಪಾಧ್ಯಕ್ಷ ಉದಯ ಎಸ್.ಕೋಟ್ಯಾನ್, ನಿರ್ದೇಶಕರಾದ ನಂದರಾಮ ರೈ, ಕೆ.ಪಿ.ಸುಚರಿತ ಶೆಟ್ಟಿ, ಸುಧಾಕರ ರೈ, ಸವಿತಾ ಎನ್.ಶೆಟ್ಟಿ ಮತ್ತಿತರರಿದ್ದರು.

Published on

ಮೂಡುಬಿದಿರೆ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (ಡಿಕೆಎಂಯುಎಲ್) ವತಿಯಿಂದ 2025-26ನೇ ಸಾಲಿನ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸಾಧನೆಯನ್ನು ಪರಿಗಣಿಸಿ ಮಂಗಳೂರು ತಾಲೂಕು ನಗರ ಪ್ರದೇಶದ ಅತ್ಯುತ್ತಮ ಡೀಲರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಬೆಳುವಾಯಿ ಸಿ.ಎ.ಬ್ಯಾಂಕ್ ಉಪಾಧ್ಯಕ್ಷೆ, ಮೂಡುಬಿದಿರೆ ನಗರದಲ್ಲಿ ನಂದಿನಿ ಹಾಲಿನ ಮಾರಾಟ ಮಳಿಗೆಯನ್ನು ನಡೆಸುತ್ತಿರುವ ಉಷಾ ದಯಾನಂದ ಪೈ ಅವರನ್ನು ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕುಲಶೇಖರದ ವೀರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಡಿಕೆಎಂಯುಎಲ್ ವತಿಯಿಂದ ಪ್ರಶಸ್ತಿ ಪ್ರದಾನ ನಡೆಯಿತು. ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಉಪಾಧ್ಯಕ್ಷ ಉದಯ ಎಸ್.ಕೋಟ್ಯಾನ್, ನಿರ್ದೇಶಕರಾದ ನಂದರಾಮ ರೈ, ಕೆ.ಪಿ.ಸುಚರಿತ ಶೆಟ್ಟಿ, ಸುಧಾಕರ ರೈ, ಸವಿತಾ ಎನ್.ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಜೆ.ಜೈಕುಮಾರ್ ಹಾಗೂ ಜಾನೆಟ್ ರೊಸಾರಿಯೋ ಉಪಸ್ಥಿತರಿದ್ದರು. ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net