ಗ್ರಾಮೀಣ ವರ್ಗದ ಕೃಷಿಕರಿಗೆ ಸವಲತ್ತು

 ವಿಜಯಾ ರೈತರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಿತು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್ ಮೊದಲಾದವರಿದ್ದರು.
ವಿಜಯಾ ರೈತರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಿತು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಗ್ರಾಮೀಣ ಕೃಷಿಕ ವರ್ಗದ ಮುಖ್ಯ ಆಶಾಕಿರಣವಾಗಿರುವ ಸಂಘದ ನೂತನ ಕಟ್ಟಡ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಯುವ ಮೂಲಕ ಇನ್ನೂ ಹೆಚ್ಚು ಸವಲತ್ತುಗಳು ಕೃಷಿಕರಿಗೆ ಲಭ್ಯವಾಗುವಂತಾಗಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಶುಭಹಾರೈಸಿದರು.
ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ ಚರಂತಿಪೇಟೆಯಲ್ಲಿ ನಡೆಯಿತು.
ಬಪ್ಪನಾಡು ಕ್ಷೇತ್ರ ಅರ್ಚಕ ನರಸಿಂಹ ಭಟ್ ವಿಶೇಷ ಪೂಜೆ ನೆರವೇರಿಸಿದರು. ಕಟ್ಟಡಕ್ಕೆ ವಿಜಯಾ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ರಂಗನಾಥ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.
ಶಾಸಕ ಉಮಾನಾಥ ಕೋಟ್ಯಾನ್‌ಮಾತನಾಡಿದರು. ಅರ್ಚಕ ಪ್ರಸಾದ ಭಟ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಮೂಲ್ಕಿ ಕ್ಷೀರಸಾಗರ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಗೋಪಿನಾಥ ಪಡಂಗ, ಮೂಲ್ಕಿ ನಪಂ ಮಾಜಿ ಅಧ್ಯಕ್ಷರಾದ ಸುನೀಲ್ ಆಳ್ವ, ಸತೀಶ್ ಅಂಚನ್, ಸುಭಾಷ್ ಶೆಟ್ಟಿ, ಮಾಜಿ ಸದಸ್ಯರಾದ ಶೈಲೇಶ್ ಕುಮಾರ್, ಭೀಮಾಶಂಕರ್, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಬಳ್ಕುಂಜೆ, ಸ್ಥಳೀಯರಾದ ಕಿಶೋರ್ ಶೆಟ್ಟಿ ಬಪ್ಪನಾಡು, ಉದಯ ಕುಮಾರ್ ಶೆಟ್ಟಿ, ಶ್ಯಾಮ್ ಪ್ರಸಾದ್ ಪಡುಪಣಂಬೂರು, ಉದಯಕುಮಾರ್ ಶೆಟ್ಟಿ, ಅಶೋಕ್ ಜನನಿ, ಉದಯ ಅಮೀನ್ ಮಟ್ಟು, ನವೀನ್‌ರಾಜ್, ಜೀವನ್ ಶೆಟ್ಟಿ ಅಂಗರಗುಡ್ಡೆ, ವಿನೋದ್‌ಕುಮಾರ್ ಬೊಳ್ಳೂರು, ರಾಜೇಶ್ ಕಿಲ್ಪಾಡಿ, ಸಾಧು ಅಂಚನ್ ಮಟ್ಟು, ಸಂಘ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ಗಂಗಾಧರ ಶೆಟ್ಟಿ ಬರ್ಕೆ ತೋಟ, ನರಸಿಂಹ ಪೂಜಾರಿ, ರಾಜೇಶ್ ಶೆಟ್ಟಿ, ಅಶೋಕ್‌ಕುಮಾರ್ ಚಿತ್ರಾಪು, ದೇವಪ್ರಸಾದ್ ಕೆಂಪುಗುಡ್ಡೆ, ಪದ್ಮಿನಿ ವಿಜಯಕುಮಾರ್ ಶೆಟ್ಟಿ, ಮಮತಾ ಪೂಂಜ, ಪ್ರಭಾಕರ ದೇವಾಡಿಗ, ನಂಜುಂಡ ಆರ್.ಕೆ., ರಾಮ್ ನಾಯ್ಕ, ಪ್ರಬಂಧಕ ಚಂದ್ರಕಾಂತ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾದ ಶಾಖಾ ಮುಖ್ಯ ಪ್ರಬಂಧಕ ಸಚಿನ್ ಹೆಗ್ಡೆ, ಇಂಜಿನಿಯರ್ ಸುಜಿತ್ ಸಾಲ್ಯಾನ್, ಗುತ್ತಿಗೆದಾರ ರಾಘು ಸುವರ್ಣ ಕೊಳಚಿಕಂಬಳ ಉಪಸ್ಥಿತರಿದ್ದರು. ಅತಿಕಾರಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಮನೋಹರ ಕೋಟ್ಯಾನ್ ಸ್ವಾಗತಿಸಿದರು. ಗಂಗಾಧರ ಶೆಟ್ಟಿ ಬರ್ಕೆತೋಟ ವಂದಿಸಿದರು.

ವಿಜಯಾ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ರಂಗನಾಥ ಶೆಟ್ಟಿ ನೇತೃತ್ವದಲ್ಲಿ ಸಂಘವು ಈಗಾಗಲೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ದೊರಕಿಸಲು ಶ್ರಮಿಸುತ್ತಿದೆ. ನೂತನ ಕಟ್ಟಡ ನಿರ್ಮಾಣದ ಮುಖಾಂತರ ಮತ್ತಷ್ಟು ಸಂಘ ಅಭಿವೃದ್ಧಿ ಪಥದತ್ತ ಮುನ್ನಡೆಯಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net