ವೈಜ್ಞಾನಿಕ ಕೃಷಿ ಪದ್ಧತಿಯಿಂದ ಲಾಭ

 ಬೋರ್ಡೋ ಮಿಶ್ರಣ ಮತ್ತು ಸಿಂಪಡಣೆ ವಾಹಿತಿ ಕಾರ್ಯಕ್ರಮದಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ವಾತನಾಡಿದರು. ಪ್ರಮುಖರಾದ ಕೃಷ್ಣ ನಾಯ್ಕ, ಬಿ.ವಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಬೋರ್ಡೋ ಮಿಶ್ರಣ ಮತ್ತು ಸಿಂಪಡಣೆ ವಾಹಿತಿ ಕಾರ್ಯಕ್ರಮದಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ವಾತನಾಡಿದರು. ಪ್ರಮುಖರಾದ ಕೃಷ್ಣ ನಾಯ್ಕ, ಬಿ.ವಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
Published on
ಬೆಳ್ವೆ: ಅಡಿಕೆ ಕೃಷಿ, ಇನ್ನಿತರ ಬೆಳೆಗಳಿಗೆ ಹವಾವಾನ ವೈಪರೀತ್ಯ ಹಾಗೂ ವಿವಿಧ ಬಗೆಯ ರೋಗಗಳಿಂದ ನಷ್ಟ ಸಂಭವಿಸುತ್ತದೆ. ಅಡಿಕೆ ಬೆಳೆಗೆ ಮಳೆಗಾಲದಲ್ಲಿ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಲಾಭ ಗಳಿಸಲು ಸಾಧ್ಯ ಎಂದು ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಹೇಳಿದರು.
ಬೆಳ್ವೆಯಲ್ಲಿ ರೈತರಿಗೆ ವೈಜ್ಞಾನಿಕ ಕೃಷಿ ಮಾಹಿತಿ ಪ್ರಯುಕ್ತ ಬುಧವಾರ ಹಮ್ಮಿಕೊಂಡ ಬೋರ್ಡೋ ಮಿಶ್ರಣ ಮತ್ತು ಸಿಂಪಡಣೆ ಮಾಹಿತಿ ಕಾರ್ಯಕ್ರಮದಲ್ಲಿ ವಾತನಾಡಿದರು.
ಕಾರ್ಕಳ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ವಿ.ಶ್ರೀನಿವಾಸ್ ಅವರು ಮಳೆಗಾಲದಲ್ಲಿ ಅಡಿಕೆ ಬೆಳೆಗೆ ಕೊಳೆರೋಗ, ಎಲೆಚುಕ್ಕಿ ರೋಗ, ಸುಳಿ ಕೊಳೆ ರೋಗ, ಗಂಟುರೋಗ, ಅಡಿಕೆ ಫಸಲು ಉದುರುವಿಕೆ, ತಡೆಗಟ್ಟುವಿಕೆ ಹಾಗೂ ಬೋರ್ಡೋ ಮಿಶ್ರಣ ಮತ್ತು ಸಿಂಪಡಣೆ ವಾಹಿತಿ ನೀಡಿದರು.
ಗೋಳಿಯಂಗಡಿ ಶ್ರೀ ದುರ್ಗಾ ವಿವಿಧೋದ್ದೇಶ ಸಹಕಾರ ಸಂ ಅಧ್ಯಕ್ಷ ಕೃಷ್ಣ ನಾಯ್ಕ ಬೆಳ್ವೆ ಮತ್ತಿತರರು ಉಪಸ್ಥಿತರಿದ್ದರು. ಪ್ರವೀಣ್ ಲೋಬೋ ಗುಮ್ಮೋಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net