ಕುಂದಾಪುರ: ಶಿಕ್ಷಣ ಕೇವಲ ಅಂಕ ಗಳಿಕೆಯಲ್ಲ, ಒಳ್ಳೆಯ ಮನುಷ್ಯನನ್ನು ರೂಪಿಸುವ ಪ್ರಕ್ರಿಯೆ. ಶಿಕ್ಷಕ ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ನಿಷ್ಠೆ, ಸಮಾನತೆ ಮುಂತಾದ ಗುಣಗಳನ್ನು ಬೆಳೆಸಲು ಪ್ರೇರೇಪಿಸಬೇಕು. ಸಮರ್ಪಣಾ ಮನೋಭಾವ ಮತ್ತು ಸೃಜನಶೀಲತೆ ಹೊಂದಿದ ಶಿಕ್ಷಕ ಮೌಲ್ಯಯುತ ಸಮಾಜದ ನಿರ್ಮಾತೃ ಎಂದು ಉಡುಪಿ ಸರ್ಕಾರಿ ಮಹಿಳಾ ಪಪೂ ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕ ದಯಾನಂದ ಡಿ.ಕಿದಿಯೂರು ಹೇಳಿದರು.