ನೇತ್ರಾವತಿ ನದಿ ತೀರದಲ್ಲಿ ಗೋಮಾಂಸ ತ್ಯಾಜ್ಯ ಎಸೆದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಹಿಂಪ ಹಾಗೂ ಬಜರಂಗ ದಳದಿಂದ ಪೊಲೀಸರಿಗೆ ದೂರು ನೀಡಲಾಯಿತು. ಸಂತೋಷ್ ಸರಪಾಡಿ, ದೀಪಕ್, ತಿಲಕ್ ಕಿಣಿ ಇತರರು ಇದ್ದರು.
ಬಂಟ್ವಾಳ: ತಾಲೂಕಿನ ನಾವೂರು ಗ್ರಾಪಂ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ಗೋವುಗಳನ್ನು ಅಕ್ರಮವಾಗಿ ವಧೆ ಮಾಡಿ, ಗೋಮಾಂಸದ ತ್ಯಾಜ್ಯವನ್ನು ನೇತ್ರಾವತಿ ನದಿ ತೀರದಲ್ಲಿ ಎಸೆದಿರುವ ಆರೋಪದ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಪೊಲೀಸರಿಗೆ ದೂರು ನೀಡಲಾಯಿತು.
ನೇತ್ರಾವತಿ ನದಿ ತೀರದಲ್ಲಿ ಕರುಳು ಸೇರಿದಂತೆ ಮಾಂಸ ತ್ಯಾಜ್ಯ ಎಸೆದು ಹೋಗಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದ್ದು, ಪರಿಸರ ಮಾಲಿನ್ಯದ ಜತೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಅಕ್ರಮವಾಗಿ ಗೋವುಗಳ ವಧೆ ಮಾಡಿ ತ್ಯಾಜ್ಯಗಳನ್ನು ನದಿ ತೀರದಲ್ಲಿ ವಿಲೇವಾರಿ ಮಾಡಿರುವವರನ್ನು ಪತ್ತೆಹಚ್ಚಿ, ಕಾನೂನು ಕ್ರಮ ಕೈಗೊಳ್ಳುವಂತೆ ಸಂಘಟನೆ ಆಗ್ರಹಿಸಿದೆ.
ಬಜರಂಗ ದಳ ಜಿಲ್ಲಾ ಸಹಸಂಯೋಜಕ ಸಂತೋಷ್ ಸರಪಾಡಿ, ವಿಹಿಂಪ ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ದೀಪಕ್, ಗೋರಕ್ಷಾ ಪ್ರಮುಖ್ ತಿಲಕ್ ಕಿಣಿ, ಸಾಗರ್, ಸಂದೇಶ್ ಉಪಸ್ಥಿತರಿದ್ದರು.