ಭಕ್ತಿಯಲ್ಲಿರಲಿ ಅರ್ಪಣಾ ಮನೋಭಾವ

 ಜಾತ್ರೋತ್ಸವದಲ್ಲಿ ಇರುವೈಲು ತಾರನಾಥ ಪೂಜಾರಿ ಅವರಿಗೆ ಪೌರ ಸನ್ಮಾನ ನೀಡಲಾಯಿತು. ಶಾಸಕ ಉಮಾನಾಥ ಕೋಟ್ಯಾನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ ಜೆ.ಶೆಟ್ಟಿ ಮೊದಲಾದವರಿದ್ದರು.
ಜಾತ್ರೋತ್ಸವದಲ್ಲಿ ಇರುವೈಲು ತಾರನಾಥ ಪೂಜಾರಿ ಅವರಿಗೆ ಪೌರ ಸನ್ಮಾನ ನೀಡಲಾಯಿತು. ಶಾಸಕ ಉಮಾನಾಥ ಕೋಟ್ಯಾನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ ಜೆ.ಶೆಟ್ಟಿ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಕೊಡುಗೆ ನೀಡಿದಾಗ ಅದು ನಿಸ್ವಾರ್ಥ ಸೇವೆಯೆನಿಸಿಕೊಳ್ಳುತ್ತದೆ. ಭಕ್ತಿಯಲ್ಲಿ ಬೇಡಿಕೆಗಿಂತ ಹೆಚ್ಚಾಗಿ ಅರ್ಪಣಾ ಮನೋಭಾವ ಇರಬೇಕು ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ಇರುವೈಲು ತಾರನಾಥ ಪೂಜಾರಿ ಹೇಳಿದರು.
ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿ ಯುದ್ಧಗಳ ಭೀತಿಯಿದ್ದರೂ ಭಾರತದಲ್ಲಿ ಶಾಂತಿ ನೆಲೆಸಿದೆ ಎಂದರೆ ಅದು ನಮ್ಮ ಸನಾತನ ಧರ್ಮ ಮತ್ತು ದೈವ-ದೇವರ ಶಕ್ತಿ ಎಂದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜೈನ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ನಿತೇಶ್ ಬಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಿದರು. ದೇವಳದ ಅರ್ಚಕ ರಾಘವೇಂದ್ರ ಭಟ್, ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಕಯ್ಯ ಪೂಜಾರಿ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಉದ್ಯಮಿ ಕುಮಾರ್ ಪೂಜಾರಿ ಇರುವೈಲು, ಊರ್ಮಿಳಾ ರಮೇಶ್ ಕುಮಾರ್ ಮಂಗಳೂರು ಮಾತನಾಡಿದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪೂವಪ್ಪ ಸಾಲ್ಯಾನ್ ತಂಗಿಲ, ಶುಭಕರ ಕಾಜವ ಕುವೆಸ್ಥಳ ಬಾಳಿಕೆ, ಪದ್ಮನಾಭ ಪೂಜಾರಿ ಕನಡ್ರಕೋಡಿ, ದೀಪಾ ದಿನೇಶ್ ಬಟಾರ, ಮೋಹನ್ ನಾಯಕ್ ಪಂಜ, ಪ್ರದೀಪ್ ಶೆಟ್ಟಿ ಕುತ್ಯಾಡಿ, ಶಿವಾನಂದ ನಾಯ್ಕ ಕೊಡಂಗೆ ಉಪಸ್ಥಿತರಿದ್ದರು.
ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳ ಕ್ಯಾಲೆಂಡರನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಪ್ರವೀಣ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಅರ್ಚಕ ಗುರುರಾಜ್ ಭಟ್ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಪೂವಪ್ಪ ಸಾಲ್ಯಾನ್ ಸ್ವಾಗತಿಸಿದರು. ದಿನೇಶ್ ಕಟ್ಟಣಿಗೆ ನಿರೂಪಿಸಿ ವಂದಿಸಿದರು.

ಸಾಧಕರಿಗೆ ಗೌರವಾರ್ಪಣೆ

ತಾರನಾಥ ಪೂಜಾರಿ ಅವರಿಗೆ ಪೌರ ಸನ್ಮಾನ ಮಾಡಲಾಯಿತು. ದೇವಸ್ಥಾನಕ್ಕೆ ವಿಶೇಷ ಕೊಡುಗೆ ನೀಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಕಯ್ಯ ಪೂಜಾರಿ, ಸೀತು ಎಂ.ಪೂಜಾರಿ, ಮಹಾಬಲ ಸಾಲ್ಯಾನ್ ಹಾಗೂ ಅಂಚೆ ಇಲಾಖೆಯ ನಿವೃತ್ತ ಅಂಚೆಪಾಲಕಿ ಅನುರಾಧ ಭಟ್, ಇರುವೈಲು ಹಾಲು ಉತ್ಪಾದಕರ ಸಂಘದ ತಿಮ್ಮಪ್ಪ ಪೂಜಾರಿ, ಅಕ್ಷಯ್ ಭಟ್, ಶ್ರೇಯಸ್ ಕಾರಂತ, ಕುಮಾರಿ ಮೋಹಿನಿ ನಾಯ್ಕ ಮತ್ತು ಕುಮಾರಿ ನಂದಿನಿ ಶೆಣೈ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net