ಮಕ್ಕಳ ಆರೋಗ್ಯ, ಶಿಕ್ಷಣದ ಬಗ್ಗೆ ಇರಲಿ ಕಾಳಜಿ

ಮಣೂರಿನ ಶ್ರೀ ರಾಮಪ್ರಸಾದ್ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಟಿ.ರಾಜೀವ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ದಿನೇಶ್ ಆಚಾರ್, ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.
ಮಣೂರಿನ ಶ್ರೀ ರಾಮಪ್ರಸಾದ್ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಟಿ.ರಾಜೀವ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ದಿನೇಶ್ ಆಚಾರ್, ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.
Published on

ಕೋಟ: ಮಕ್ಕಳನ್ನು ಬಾಲ್ಯದಲ್ಲಿಯೇ ಅಂಗನವಾಡಿಗೆ ಕಳುಹಿಸಬೇಕು. ಜತೆಗೆ ಪಾಲಕರು ಮನೆಯಲ್ಲಿಯೂ ಮಕ್ಕಳ ಆರೋಗ್ಯ, ಸಂಸ್ಕಾರ ಹಾಗೂ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ರೋಟರಿ ಕ್ಲಬ್ ತೆಕ್ಕಟ್ಟೆ ಅಧ್ಯಕ್ಷ ಟಿ.ರಾಜೀವ್ ಶೆಟ್ಟಿ ಹೇಳಿದರು.

ತೆಕ್ಕಟ್ಟೆ ರೋಟರಿ ಕ್ಲಬ್ ವತಿಯಿಂದ ಶುಕ್ರವಾರ ಮಣೂರಿನ ಶ್ರೀ ರಾಮಪ್ರಸಾದ್ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಗನವಾಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 30 ಮಕ್ಕಳಿಗೆ ಹೈಕೋರ್ಟ್ ವಕೀಲ ಅಮಿತ್ ಸಿ.ಶೆಟ್ಟಿ ಕೊಡುಗೆ ನೀಡಿದ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.
ಕೋಟ ಪಂಚವರ್ಣ ಸಂಘಟನೆ ವತಿಯಿಂದ ಸಂಘದ ಉಪಾಧ್ಯಕ್ಷ ದಿನೇಶ್ ಆಚಾರ್ ಹಸಿರು ಹೆಜ್ಜೆ ಮೂಲಕ ಗಿಡ ವಿತರಿಸಿದರು. ರೋಟರಿ ಪಿಎಚ್‌ಎಫ್‌ಟಿ ಸುಧಾಕರ್ ಶೆಟ್ಟಿ, ವಲಯ 2ರ ಸಹಾಯಕ ಗವರ್ನರ್ ಸುರೇಶ್ ಬೇಳೂರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ನಿರ್ಮಲಾ ಉರಾಳ ಸ್ವಾಗತಿಸಿದರು. ಕ್ಲಬ್ ಸದಸ್ಯ ನಿತ್ಯಾನಂದ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net