ಬಿಎಸ್​ಎನ್​ಎಲ್​ ಟವರ್​ಗೆ ಬ್ಯಾಟರಿ, ಸೋಲಾರ್​ ಮಂಜೂರು

ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.
ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.
Published on

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

ಉಡುಪಿ: ಜಿಲ್ಲೆಯಲ್ಲಿರುವ 71 ಬಿಎಸ್​ಎನ್​ಎಲ್​ ಟವರ್​ಗಳಿಗೆ ಕೇಂದ್ರ ಸರ್ಕಾರ ಹೊಸದಾಗಿ ಬ್ಯಾಟರಿ ಹಾಗೂ ಸೋಲಾರ್​ ಸ್ಥಾವರ ಮಂಜೂರು ಮಾಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾಜ್​ ಸಿಂಧಿಯಾ ಅವರು ಈ ವಿಚಾರವಾಗಿ ನನಗೆ ಪತ್ರದ ಮೂಲಕ ತಿಳಿಸಿದ್ದು, 2026ರ ಜನವರಿ ತಿಂಗಳೊಳಗೆ ಬ್ಯಾಟರಿ ಸರಬರಾಜು ಮಾಡಲಾಗುವುದು. ತಮ್ಮ ಮನವಿಯಂತೆ 21 ಕಡೆಗಳಲ್ಲಿ ಸೋಲಾರ್​ ಸ್ಥಾವರವೂ ಮಂಜೂರಾಗಿದ್ದು, ಇದನ್ನು 2026ರ ಮಾರ್ಚ್​ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಉಡುಪಿಯ ಬಿಎಸ್​ಎನ್​ಎಲ್​ ಕಚೇರಿಯಲ್ಲಿ ನಡೆದಿದ್ದ ಕುಂದು&ಕೊರತೆಗಳ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿರುವ ಟವರ್​ಗಳ ಸಮಸ್ಯೆಯನ್ನು ತಿಳಿದು, ಕೇಂದ್ರ ಸಚಿವರ ಗಮನಕ್ಕೆ ತರಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಹೊಸ ಬ್ಯಾಟರಿ ಮತ್ತು ಸೋಲಾರ್​ ಸ್ಥಾವರಗಳ ಅಳವಡಿಕೆಯಿಂದ ಜಿಲ್ಲೆಯಲ್ಲಿ ಬಿಎಸ್​ಎನ್​ಎಲ್​ನ ಗುಣಮಟ್ಟ ಹೆಚ್ಚಲಿದೆ ಎಂದು ಸಂಸದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net