ಬಪ್ಪನಾಡು ದೇವಳ ಜಾತ್ರಾ ಮಹೋತ್ಸವ

ಬಪ್ಪನಾಡು ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ವಿವಿಧ ಸಂಘ-ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಉಮಾನಾಥ ಕೋಟ್ಯಾನ್ ಮಾತನಾಡಿದರು. ಪ್ರಮುಖರಾದ ದುಗ್ಗಣ್ಣ ಸಾವಂತ ಅರಸರು, ರಾಘವೇಂದ್ರ ನಾಯ್ಕ, ಮಾಧವ, ಡಾ.ಸುನೀಲ್ ಜತ್ತನ್ನ, ಗುರುವಪ್ಪ ಕೋಟ್ಯಾನ್, ಸುಜಿತ್ ಸಾಲ್ಯಾನ್, ಸತೀಶ್ ಅಂಚನ್, ಶೈಲೇಶ್ ಕುಮಾರ್, ಕಿರಣ್ ಶೆಟ್ಟಿ ಕೋಲ್ನಾಡು ಗುತ್ತು ಇದ್ದರು.

Published on
ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ, ಆರಕ್ಷಕರ, ವೈದ್ಯರ, ಮೆಸ್ಕಾಂ ಅಧಿಕಾರಿಗಳ ಜತೆ ಜಂಟಿ ಸಭೆ ಬಪ್ಪನಾಡು ಜ್ಞಾನ ಮಂದಿರದಲ್ಲಿ ನಡೆಯಿತು.
ಕ್ಷೇತ್ರದ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು ಪ್ರಾಸ್ತಾವಿಕವಾಗಿ ಮಾತನಾಡಿ, ಬಪ್ಪನಾಡು ದೇವಸ್ಥಾನದ ಜಾತ್ರಾ ಮಹೋತ್ಸವ ಏ.1ರಿಂದ 8ರವರೆಗೆ ನಡೆಯಲಿದ್ದು, ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಲು ಮನವಿ ಮಾಡಿದರು. ಏ.1ರಂದು ಬೆಳಗ್ಗೆ 10 ಗಂಟೆಗೆ ದೇವರ ಸನ್ನಿಧಿಯಲ್ಲಿ ಕ್ಷೇತ್ರಕ್ಕೆ ನೂತನ ಬ್ರಹ್ಮರಥ, ಕ್ಷೇತ್ರಪಾಲ ಗುಡಿ ನವೀಕರಣ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳ ವಿಜ್ಞಾಪನಾಪತ್ರ ಬಿಡುಗಡೆಗೊಳ್ಳಲಿದೆ. ಭಕ್ತರು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಲಕ್ಷಾಂತರ ಭಕ್ತರು ಆಗಮಿಸುವ ಬಪ್ಪನಾಡು ಜಾತ್ರಾ ಮಹೋತ್ಸವವನ್ನು ಅಧಿಕಾರಿಗಳು ವಿವಿಧ ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಹಬ್ಬ ಯಶಸ್ವಿಗೊಳಿಸಿ ಎಂದರು.

ಅಪರಾಧ ತಡೆಗೆ ಬ್ಯಾನರ್

ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅಪರಾಧ ಕೃತ್ಯ ತಡೆಗೆ ಅಲ್ಲಲ್ಲಿ ಬ್ಯಾನರ್ನ್‌ ಅಳವಡಿಸಿ ಜಾಗೃತಿ ಮೂಡಿಸುವುದರ ಜತೆಗೆ ಅಲ್ಲಲ್ಲಿ ಸಿಬ್ಬಂದಿ ನೇಮಿಸಿ ಅಪರಾಧ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಮೂಲ್ಕಿ ಪೊಲೀಸ್ ಠಾಣೆ ಎಸ್‌ಐ ರಾಘವೇಂದ್ರ ನಾಯ್ಕ ತಿಳಿಸಿದರು. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಎಎಸ್‌ಐ ಮಾಧವ, ಪಾರ್ಕಿಂಗ್ ಬಗ್ಗೆ ಸ್ಥಳೀಯ ನಾಗರಿಕರ ಹಾಗೂ ಸಂಘ-ಸಂಸ್ಥೆಗಳ ಸಹಕಾರ ಬೇಕು ಎಂದರು.
ದೇವಸ್ಥಾನದ ಶೌಚಗೃಹದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸಂಪತ್ ಕಾರ್ನಾಡ್ ಸಲಹೆ ನೀಡಿದರು. ಇದಕ್ಕೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಉತ್ತರಿಸಿ ಶೌಚಗೃಹ ನಿರ್ವಹಣೆಗೆ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಸುನೀಲ್ ಜತ್ತನ್ನ, ಗುರುವಪ್ಪ ಕೋಟ್ಯಾನ್, ಸುಜಿತ್ ಸಾಲ್ಯಾನ್, ಮೂಲ್ಕಿ ನಪಂ ಮಾಜಿ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಸದಸ್ಯ ಶೈಲೇಶ್ ಕುಮಾರ್, ಕಿರಣ್ ಶೆಟ್ಟಿ ಕೋಲ್ನಾಡು ಗುತ್ತು, ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ವಿನೋದ್ ಸಾಲ್ಯಾನ್ ಬೆಳ್ಳಾಯರು, ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್, ಕಾರ್ತಿಕ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಮೂಲ ಸೌಲಭ್ಯ ಅಗತ್ಯ

ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು ಜಾತ್ರಾ ಮಹೋತ್ಸವದ ಸಂದರ್ಭ ಕ್ಷೇತ್ರದಲ್ಲಿ ಆಂಬುಲೆನ್ಸ್ ವ್ಯವಸ್ಥೆ, ವಿದ್ಯುತ್ ಲೋಡ್ ಶೆಡ್ಡಿಂಗ್ ನಿಯಂತ್ರಣ, ಕುಡಿಯುವ ನೀರಿನ ವ್ಯವಸ್ಥೆ 24*7 ಆಗಬೇಕು, ನಿತ್ಯ ಅನ್ನದಾನದ ತ್ಯಾಜ್ಯ ವಿಲೇವಾರಿ ವ್ಯವಸ್ಥಿತವಾಗಿ ನಡೆಯಬೇಕು, ಪ್ಲಾಸ್ಟಿಕ್ ತ್ಯಾಜ್ಯ ನಿಷೇಧ ಕಟ್ಟುನಿಟ್ಟಾಗಿ ನಡೆಯಬೇಕು, ಅನಾಹುತ ನಡೆಯದಂತೆ ಆರೋಗ್ಯ ಇಲಾಖೆ, ನಪಂ, ಮೆಸ್ಕಾಂ, ಅಗ್ನಿಶಾಮಕದಳ ಘಟಕದ ಅಧಿಕಾರಿಗಳು ಜಾಗೃತರಾಗಿರಬೇಕು ಎಂದು ಅಭಿವೃದ್ಧಿ ಸಮಿತಿ ಸುನೀಲ್ ಆಳ್ವ ತಿಳಿಸಿದರು.
------ಫೋಟೋ------
ಎಂಯುಎಲ್‌_ಮಾ28_2 ಬಪ್ಪನಾಡು
ಬಪ್ಪನಾಡು ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ವಿವಿಧ ಸಂಘ-ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಉಮಾನಾಥ ಕೋಟ್ಯಾನ್ ಮಾತನಾಡಿದರು. ಪ್ರಮುಖರಾದ ದುಗ್ಗಣ್ಣ ಸಾವಂತ ಅರಸರು, ರಾಘವೇಂದ್ರ ನಾಯ್ಕ, ಮಾಧವ, ಡಾ.ಸುನೀಲ್ ಜತ್ತನ್ನ, ಗುರುವಪ್ಪ ಕೋಟ್ಯಾನ್, ಸುಜಿತ್ ಸಾಲ್ಯಾನ್, ಸತೀಶ್ ಅಂಚನ್, ಶೈಲೇಶ್ ಕುಮಾರ್, ಕಿರಣ್ ಶೆಟ್ಟಿ ಕೋಲ್ನಾಡು ಗುತ್ತು ಇದ್ದರು.
***************************
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net