ನಿಷೇಧಿತ ಪಾನ್ ಮಸಾಲಾ ವಶ

Arrest
Arrest
Published on
ಕಾಸರಗೋಡು: ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 318 ಪ್ಯಾಕೆಟ್ ಪಾನ್‌ಮಸಾಲಾ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕೆದುಪಡ್ಪು ನಿವಾಸಿ ಮಾಧವ(51)ಎಂಬಾತನನ್ನು ಬಂಧಿಸಿದ್ದಾರೆ.
ವೀಯಪದವು-ಪಳ್ಳತ್ತಡ್ಕ ರಸ್ತೆಯಲ್ಲಿ ಅಂಗಡಿಯೊಂದರ ಮುಂಭಾಗ ನಿಂತಿದ್ದ ಮಾಧವನನ್ನು ಸಂಶಯದ ಮೇರೆಗೆ ಎಸ್‌ಐ ಉಮೇಶ್ ಕೆ.ಆರ್. ನೇತೃತ್ವದ ಪೊಲೀಸರ ತಂಡ ತಪಾಸಣೆ ನಡೆಸಿದಾಗ ಚೀಲದಲ್ಲಿ ಪಾನ್‌ಮಸಾಲೆ ಪತ್ತೆಯಾಗಿದೆ. ಬಂಧಿತನಿಗೆ ನೋಟಿಸ್ ನೀಡಿ ಬಿಡುಗಡೆಗೊಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net