ಇಂದು ಎನಗೆ ಗೋವಿಂದ’ ಕನ್ನಡ ಚಲನಚಿತ್ರದ ಮುಹೂರ್ತ

ಇಂದು ಎನಗೆ ಗೋವಿಂದ ಚಲನಚಿತ್ರಕ್ಕೆ ಮೂರ್ತ ನೆರವೇರಿತು.
ಇಂದು ಎನಗೆ ಗೋವಿಂದ ಚಲನಚಿತ್ರಕ್ಕೆ ಮೂರ್ತ ನೆರವೇರಿತು.
Published on
ಉಡುಪಿ: ಬನ್ನಂಜೆ ಗೋವಿಂದಾಚಾರ್ಯರಿಂದ ಧಾರ್ಮಿಕ ಆಂದೋಲನ ನಡೆದಿದೆ. ದೇಶ ವಿದೇಶಗಳಲ್ಲಿ ಪ್ರವಚನದ ಮೂಲಕ ಜನರಿಗೆ ಸನ್ಮಾರ್ಗವನ್ನು ತೋರಿದರು. ಮಧ್ವಾಚಾರ್ಯರ ತತ್ತ್ವ ಜಗತ್ತಿನಾದ್ಯಂತ ಪ್ರಸಾರವಾಗಬೇಕು ಎಂಬ ಬಯಕೆ ಹೊಂದಿದ್ದರು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. 
ರಥಬೀದಿಯ ಅದಮಾರು ಮಠದ ಆವರಣದಲ್ಲಿ ಸೋಮವಾರ ಬೆಂಗಳೂರಿನ ಬನ್ನಂಜೆ ಗೋವಿಂದ ಆಚಾರ್ಯ ಪ್ರತಿಷ್ಠಾನ ವತಿಯಿಂದ ಚಿತ್ರ ನಿರ್ಮಾಣಗೊಳ್ಳಲಿರುವ ಕಾರ್ತಿಕ್‌ ಸರಗೂರು ಚಿತ್ರಕಥೆ ರಚನೆ, ನಿರ್ದೇಶನದ ವಿದ್ವಾಂಸ ಪದ್ಮಶ್ರೀ ಬನ್ನಂಜೆ ಗೋವಿಂದ ಆಚಾರ್ಯ ಅವರ ಆತ್ಮಕಥೆ ‘ಇಂದು ಎನಗೆ ಗೋವಿಂದ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
 ಬನ್ನಂಜೆ ಅವರ ಜೀವನ ಕಥೆಯ ರೂಪದಲ್ಲಿ ಸಿನೆಮಾ ಆಗುತ್ತಿರುವುದು ಅತ್ಯಂತ ಸಂತೋಷದಾಯಕ. ಇದು ಬನ್ನಂಜೆಯವರಿಗೆ ಸಲ್ಲಿಸುತ್ತಿರುವ ಗೌರವ. ವಿದ್ವಾಂಸರ ಬಗ್ಗೆ ಸಿನೆಮಾ ಮಾಡುವುದು ಉತ್ತಮ ಬೆಳವಣಿಗೆ. ಎಂದು ಹೇಳಿದರು. 
 ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಬನ್ನಂಜೆ ಗೋವಿಂದ ಆಚಾರ್ಯ ಅವರು ಅಧ್ಯಾತ್ಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಾಗಿದ್ದಾರೆ. ಅನೇಕ ಯುವ ಸಾಧಕರಿಗೆ ಪ್ರೇರಣೆ ನೀಡಿದ್ದಾರೆ. ಬನ್ನಂಜೆಯವರ ಮೂಲಕ ಮಧ್ವಾಚಾರ್ಯಯ ತತ್ತ್ವಗಳು ಇನ್ನಷ್ಟು ಸಜ್ಜನರಿಗೆ ಪಸರಿಸುವಂತಾಗಲಿ ಎಂದರು. 
ಪರ್ಯಾಯ ಶ್ರೀ ಶಿರೂರು ಮಠದ ವೇದವರ್ಧನ ಶ್ರೀಗಳು ಆಶೀರ್ವಚನ ನೀಡಿ, ಧಾರ್ಮಿಕ ಆಚರಣೆಯ ಮಹತ್ತವ ತಿಳಿದು ಅನುಸರಿಸಲು ಗೋವಿಂದ ಆಚಾರ್ಯರ ಪ್ರವಚನ ಪ್ರೇರಕವಾಗಿದೆ ಎಂದರು. 
ವೀಣಾ ಬನ್ನಂಜೆ ವಂದಿಸಿದರು. ಕೃಷ್ಣರಾಜ ಕುತ್ಪಾಡಿ ಸ್ವಾಗತಿಸಿ, ನಿರೂಪಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net