ರಾಜ್ಯ ಸರ್ಕಾರದ ದ್ವಿಭಾಷಾ ನೀತಿಯಿಂದ ತುಳು ಪಠ್ಯಕ್ಕೆ ತೊಂದರೆ

ಬನ್ನಂಜೆ ಬಾಬು ಅಮೀನ್​ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ.
ಬನ್ನಂಜೆ ಬಾಬು ಅಮೀನ್​ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ.
Published on

ಉಡುಪಿ: ದೇಶದಲ್ಲಿ ಅಳಿವಿನಂಚಿನಲ್ಲಿರುವ 32 ಭಾಷೆಗಳಲ್ಲಿ ತುಳು ಕೂಡ ಒಂದಾಗಿದೆ. ರಾಜ್ಯ ಸರ್ಕಾರ ದ್ವಿಭಾಷಾ ನೀತಿ ಅನುಸರಿಲು ಮುಂದಾಗಿರುವುದರಿಂದ ತೃತೀಯ ಐಚ್ಛಿಕ ಭಾಷೆಯಾಗಿ ತುಳುವನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಮಂಗಳೂರು ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ದುಗ್ಗಪ್ಪ ಕಜೆಕಾರ್​ ಹೇಳಿದರು.

ಯುವವಾಹಿನಿ ಘಟಕದ ಆಶ್ರಯದಲ್ಲಿ ನಡೆದ ಬನ್ನಂಜೆ ಬಾಬು ಅಮೀನ್​ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕೃತಕ ಬುದ್ಧಿಮತ್ತೆಯಿಂದ ಸೃಜನಶೀಲತೆ ಮರೆಯಾಗುತ್ತಿದೆ. ಇದನ್ನು ಸೃಷ್ಟಿಮಾಡಿದ ಮನುಷ್ಯ ಎಐಗಿಂತ ಬಹಳಷ್ಟು ಮುಂದೆ ಹೋಗಬಹುದು. ಸಾವಿರಾರು ವರ್ಷಗಳ ಹಿಂದೆ ಹಿರಿಯ ಸೃಷ್ಟಿ ಮಾಡಿದ ಕುಟುಂಬ ಪದ್ಧತಿ, ವಿವಾಹ, ಜಾನಪದ ಪರಂಪರೆಗೆ ಪರ್ಯಾಯವಿಲ್ಲ ಎಂದರು.

ಹಿರಿಯ ಸಂಶೋಧಕ ಮತ್ತು ಜಾನಪದ ವಿದ್ವಾಂಸ ಡಾ. ಅಭಯ ಕುಮಾರ್ ಮಾತನಾಡಿ​, ಸಿದ್ಧಾಂತದ ಆಧಾರದಲ್ಲಿ ಜಾನಪದ ಅಧ್ಯಯನ ಮಾಡುವವರು ವಿರಳವಾಗುತ್ತಿದ್ದಾರೆ. ಜಾನಪದ ಸಿದ್ಧಾಂತ ಚೌಕಟ್ಟಿನಲ್ಲಿ ವಿಷಯ ಮಂಡನೆ ಮಾಡಿದರೆ ಸಂಶೋಧನೆ ಗಟ್ಟಿಯಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕ ಶೇಖರ ಪೂಜಾರಿ ಅವರಿಗೆ ಜಾನಪದ ಕಲಾವಿದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿ ಅಂಶುಮಾಲಿ ಮಣಿಪಾಲ ಪ್ರಶಸ್ತಿ ಪ್ರದಾನ ಮಾಡಿದರು.

ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್​ ಕುಮಾರ್​ ಪಡ್ಡು ಮತ್ತು ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ಸುರೇಖಾ ಕೆ., ರಾಜ್ಯೋತ್ಸವ ಪ್ರಶಸ್ತಿ ಪುರಸತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್​, ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ವಿನೋದ್​ ಮಂಚಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಭಾಸ್ಕರ ಸುವರ್ಣ ಸ್ವಾಗತಿಸಿದರು. ಮುದ್ದು ಮೂಡುಬೆಳ್ಳೆ ಪ್ರಸ್ತಾವನೆಗೈದರು. ತೇಜಸ್​ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net