ಬ್ಯಾಂಕ್ ಕಾವಲುಗಾರನಿಗೆ ಇರಿದು ಕೊಲೆ

 ಸುರೇಶ್ ಬಿ.ಕೆ.
ಸುರೇಶ್ ಬಿ.ಕೆ.
Published on
ಕಾಸರಗೋಡು: ಕುಂಬ್ಡಾಜೆ ಮಾರ್ಪನಡ್ಕದಲ್ಲಿ ಭಾನುವಾರ ಬ್ಯಾಂಕ್ ಕಾವಲುಗಾರನೊಬ್ಬನನ್ನು ತಂಡವೊಂದು ಮಾರಕಾಯುಧಗಳಿಂದ ಇರಿದು ಕೊಲೆ ಮಾಡಿದೆ. ಮಾರ್ಪನಡ್ಕ ಬಳಿಯ ಬೆದ್ರುಕೂಡ್ಲು ನಿವಾಸಿ ಸುರೇಶ್ ಬಿ.ಕೆ (45) ಕೊಲೆಯಾದವರು.
ಸುರೇಶ್ ಅವರು ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಮಾರ್ಪನಡ್ಕ ಶಾಖೆಯಲ್ಲಿ ಕಾವಲುಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಾರ್ಪನಡ್ಕದಲ್ಲಿ ಕಿರಣ್, ಅಖಿಲೇಶ್ ಎಂಬುವರು ಮಾರಕಾಯುಧಗಳಿಂದ ಸುರೇಶ್ ಅವರಿಗೆ ಇರಿದಿದ್ದಾರೆ.
ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಚೆಂಗಳ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕ್ರಿಕೆಟ್ ಪಂದ್ಯಾಟದ ವಿಚಾರವಾಗಿ ಉಂಟಾದ ವಾಗ್ವಾದ ಕೊಲೆಗೆ ಕಾರಣವಾಗಿದೆ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net