ಬಂಡೀಮಠ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

 ಪ್ರಥಮ ಬಹುಮಾನ ಪಡೆದ ಸುಜಿತ್ ನಾಯ್ಕ ಸಾರಥ್ಯದ ಮಹಾಲಿಂಗೇಶ್ವರ ತಂಡ.
ಪ್ರಥಮ ಬಹುಮಾನ ಪಡೆದ ಸುಜಿತ್ ನಾಯ್ಕ ಸಾರಥ್ಯದ ಮಹಾಲಿಂಗೇಶ್ವರ ತಂಡ.
Published on
ಬ್ರಹ್ಮಾವರ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಬಂಡೀಮಠ ಗ್ರೌಂಡ್‌ನಲ್ಲಿ ಬಂಡೀಮಠ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಗುರುವಾರ ನಡೆಯಿತು. ಪಂದ್ಯಾಕೂಟವನ್ನು ಹಿರಿಯರಾದ ಬಾಬುರಾಯ ಆಚಾರ್ಯ ಉದ್ಘಾಟಿಸಿದರು.

ಬಂಡೀಮಠದ 5 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಸುಜಿತ್ ನಾಯ್ಕ ಸಾರಥ್ಯದ ಮಹಾಲಿಂಗೇಶ್ವರ ತಂಡವು ನಿಹಾಲ್ ಸಾರಥ್ಯದ ಕಾಶಿ ವಿಶ್ವನಾಥ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ವೆಂಕಟೇಶ್ ಆಚಾರ್ಯ, ಬೆಸ್ಟ್ ಬೌಲರ್ ಆಗಿ ಶ್ರೀನಿವಾಸ್ ಪೂಜಾರಿ, ಬೆಸ್ಟ್ ಫಿಲ್ಡರ್ ಆಗಿ ಯೋಗೀಶ್ ಶೆಟ್ಟಿ ಹಾಗೂ ಸಂದೇಶ್ ಶೆಟ್ಟಿ ಹಾಗೂ ಬೆಸ್ಟ್ ಎಮರ್ಜಿಂಗ್ ಪ್ಲೇಯರ್ ಆಗಿ ನಿಹಾಲ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರೋಹಿತ್ ಆಚಾರ್ಯ ಮತ್ತು ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಶ್ರೀಕಾಂತ್ ಆಚಾರ್ಯ ಪಡೆದರು.
ಸಮಾರೋಪದಲ್ಲಿ ಅನಿಲ್, ಮಹೇಶ್ ಪೂಜಾರಿ, ಶೇಖರ ನಾಯ್ಕ, ಬಿಜೆಪಿ ಬಂಡೀಮಠ ಬೂತ್‌ನ ಪ್ರಶಾಂತ್ ಶೆಟ್ಟಿ, ಕಿರಣ್ ಕಲ್ಕೂರ್, ದಾನಿಗಳಾದ ಉಪೇಂದ್ರ ಆಚಾರ್ಯ, ಭರತ್ ಆಚಾರ್ಯ, ಒಯೆ ಫ್ರೆಂಡ್ಸ್‌ನ ರಾಕೇಶ್ ನಾಯ್ಕ, ಯೋಗೀಶ್ ಶೆಟ್ಟಿ, ಶ್ರೀನಿವಾಸ್ ಪೂಜಾರಿ ಉಪಸ್ಥಿತರಿದ್ದರು. ಅಕ್ಷಯ್ ಆಚಾರ್ಯ ವೀಕ್ಷಕ ವಿವರಣೆ ನೀಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net