ಶಿವ-ಶಕ್ತಿಯ ವಿಶೇಷ ಆರಾಧನಾ ತಾಣ ಬಳಂಜ

 ಬಾಳೆಕುದ್ರು ಜಗದ್ಗುರು ಶಂಕರಾಚಾರ್ಯ ವಾಸುದೇವ ಸದಾಶಿವಾಶ್ರಮ ಮಹಾ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಹರೀಶ್ ಪೂಂಜ, ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ್, ಬಳಂಜ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್ದಡ್ಕ ಮೊದಲಾದವರಿದ್ದರು.
ಬಾಳೆಕುದ್ರು ಜಗದ್ಗುರು ಶಂಕರಾಚಾರ್ಯ ವಾಸುದೇವ ಸದಾಶಿವಾಶ್ರಮ ಮಹಾ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಹರೀಶ್ ಪೂಂಜ, ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ್, ಬಳಂಜ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್ದಡ್ಕ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶಿವ-ಶಕ್ತಿಯನ್ನು ವಿಶೇಷ ರೀತಿಯಲ್ಲಿ ಆರಾಧಿಸಿಕೊಂಡು ಬಂದಿರುವ ಊರು ಬಳಂಜ. ಶಿವ ಬಿಟ್ಟು ಶಕ್ತಿ ಇಲ್ಲ, ಹಾಗೆಯೇ ಶಕ್ತಿ ಬಿಟ್ಟು ಶಿವ ಇಲ್ಲ. ದುರ್ಗೆ ಪಾರ್ವತಿಗೆ ಸಮಾನವಾಗಿದ್ದು ಪಾರ್ವತಿ-ಪಂಚಲಿಗೇಶ್ವರನ ದಿವ್ಯ ಸಾನ್ನಿಧ್ಯ ಬ್ರಹ್ಮಕಲಶೋತ್ಸವದ ಶುಭ ಸಂದರ್ಭದಲ್ಲಿದೆ ಎಂದು ಬಾಳೆಕುದ್ರು ಜಗದ್ಗುರು ಶಂಕರಾಚಾರ್ಯ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮೀಜಿ ಹೇಳಿದರು.
ಬಳಂಜ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಪರಮೇಶ್ವರಿಯ ಮೂಲಸ್ಥಾನದೆಡೆಗೆ ಭಕ್ತರ ನಡಿಗೆ ‘ಕೇರಿಂಜ ಯಾತ್ರೆ’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನವದುರ್ಗೆಯರು ಪಾರ್ವತಿಯ ಸ್ವರೂಪ. ಇಲ್ಲಿ ಪಂಚಲಿಂಗೇಶ್ವರನ ರಮಣಿಯಾಗಿ ಪಾರ್ವತಿ ದುರ್ಗಾಪರಮೇಶ್ವರಿ ರೂಪದಲ್ಲಿ ನೆಲೆಸಿದ್ದಾಳೆ. ಇಲ್ಲಿನ ಪಂಚಲಿಂಗೇಶ್ವರ ದೇವರಿಗೂ ಕೇರಿಂಜ ಬೆಟ್ಟದ ಮೇಲೆ ವಿರಾಜಮಾನರಾಗಿರುವ ದುರ್ಗಾ ದೇವಿಗೂ ಅವಿನಾಭಾವ ಸಂಬಂಧವಿದೆ. ಶಾಂಡಿಲ್ಯ ಮುನಿಗಳು ಕೇರಿಂಜದಲ್ಲಿ ದುರ್ಗೆಯ ಆರಾಧನೆ ಮಾಡಿದ್ದರು. ಸಮಸ್ತ ಗ್ರಾಮಸ್ಥರು ಒಗ್ಗೂಡಿ ಮುಂಬರುವ ದೇವತಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಬ್ರಹ್ಮಕಲಶೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಲು ಊರಿನ ಪ್ರತಿಯೊಬ್ಬರ ಸಹಕಾರ ಬೇಕು. ಬಳಂಜ ಊರಿಗೆ ಪ್ರಸಿದ್ಧಿ ತರುವ ಕಲ್ಪನೆಗೆ ನಾವು ಜತೆಯಾಗಬೇಕು. ಒಗ್ಗಟ್ಟಿನಿಂದ ಕೆಲಸ ಮಾಡುವ ಶಕ್ತಿ ಈ ಗ್ರಾಮದ ವಿಶೇಷತೆ ಎಂದರು.
ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್ದಡ್ಕ, ದುರ್ಗಾಪರಮೇಶ್ವರಿ ದೇವಳಕ್ಕೆ ಸಂಬಂಧಪಟ್ಟ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಪ್ರಮುಖರಾದ ರಾಕೇಶ್ ಹೆಗ್ಡೆ ಬಳಂಜ, ಸಂತೋಷ್ ಕುಮಾರ್ ಕಾಪಿನಡ್ಕ, ಜಯ ಸಾಲಿಯಾನ್, ವಿಶ್ವನಾಥ ಹೊಳ್ಳ, ರಾಘವೇಂದ್ರ ಭಟ್, ಸುರೇಶ್ ಶೆಟ್ಟಿ ಕುರೆಲ್ಯ, ರತ್ನರಾಜ್ ಜೈನ್, ಸತೀಶ್ ರೈ ಬಾರ್ದಡ್ಕ, ಸತೀಶ್ ಶೆಟ್ಟಿ, ರವೀಂದ್ರ ಶೆಟ್ಟಿ, ವಿನು ಬಳಂಜ, ಗುರುಪ್ರಸಾದ್ ಹೆಗ್ಡೆ, ಮನೋಹರ್ ಬಳಂಜ, ಸಂತೋಷ್ ಪಿ.ಕೋಟ್ಯಾನ್, ರಂಜಿತ್ ಮಜಲಡ್ಡ, ಸತೀಶ್ ಕೆ.ಬರಮೇಲು, ರಜತ್ ಹೆಗ್ಡೆ, ಹರೀಶ್ ವೈ.ಚಂದ್ರಮ, ಸುರೇಶ್ ಪೂಜಾರಿ, ಗಣೇಶ್ ಬೊಂಟ್ರೋಟ್ಟು, ಸುರೇಶ್ ಪೂಜಾರಿ ಹೇವ, ಸತೀಶ್ ದೇವಾಡಿಗ, ಪ್ರಭಾಕರ ಹೆಗ್ಡೆ, ಜಗದೀಶ್ ಪೆರಾಜೆ, ತಿಮ್ಮಪ್ಪ ಪೂಜಾರಿ, ಪ್ರವೀಣ್ ಲಾಂತ್ಯಾರು, ದೀಪಕ್ ಎಚ್.ಡಿ., ಜಗದೀಶ್ ರೈ, ದುಗ್ಗಯ್ಯ ಪೂಜಾರಿ, ರಮಾನಾಥ ರೈ, ಅಪಾರ ಭಕ್ತರು ಉಪಸ್ಥಿತರಿದ್ದರು.
ಪ್ರಗತಿಪರ ಕೃಷಿಕ ವಿಶ್ವನಾಥ ಹೊಳ್ಳ ಸ್ವಾಗತಿಸಿದರು. ನಿವೃತ್ತ ಬ್ಯಾಂಕ್ ಮ್ಯಾನೇಜರ್ ರವೀಂದ್ರ ಶೆಟ್ಟಿ ವಂದಿಸಿದರು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಚಂದ್ರಶೇಖರ್ ಪಿ.ಕೆ. ಕಾರ್ಯಕ್ರಮ ನಿರೂಪಿಸಿದರು.

ಜಾತಿ ಭೇದ ಮರೆತು ಹಾಗೂ ರಾಜಕೀಯ ಹಿತಾಸಕ್ತಿ ಬಿಟ್ಟು ಹಿಂದೂಗಳು ಒಂದೇ ಎಂಬ ಭಾವನೆಯಿಂದ ಬ್ರಹ್ಮಕಲಶೋತ್ಸವ ಯಶಸ್ಸಿಗೆ ಎಲ್ಲರೂ ಕಾರಣೀಭೂತರಾಗಬೇಕು. ವೈಯಕ್ತಿಕ ಭಿನ್ನಾಭಿಪ್ರಾಯ ಬಿಟ್ಟು ದೇವರ ಸೇವೆ ಮಾಡಬೇಕು. ದೇವರ ಉತ್ಸವದಲ್ಲಿ ನಾವೆಲ್ಲರೂ ದೇವರ ಭಕ್ತರು ಎಂಬ ಸಂಕಲ್ಪದಿಂದ ಕೆಲಸ ಮಾಡುವ ಪ್ರತಿಜ್ಞೆ ಮಾಡಬೇಕು. ಈ ಮೂಲಕ ಸಾನ್ನಿಧ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net