ಪಂಚಾಯಿತಿ ಮಟ್ಟದಲ್ಲಿ ಜಲಜೀವನ್ ಮಿಷನ್ ಅರಿವು

 ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿಯಲ್ಲಿ ವಿಶೇಷ ಕಾರ್ಯಾಗಾರ ನಡೆಯಿತು. ಜೈಪ್ರಕಾಶ್ ಸಿ, ನಟೇಶ್ ಕುಮಾರ್, ವ್ನಿೇಶ್ ರಾಜ್ ಮೊದಲಾದವರು ಇದ್ದರು.
ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿಯಲ್ಲಿ ವಿಶೇಷ ಕಾರ್ಯಾಗಾರ ನಡೆಯಿತು. ಜೈಪ್ರಕಾಶ್ ಸಿ, ನಟೇಶ್ ಕುಮಾರ್, ವ್ನಿೇಶ್ ರಾಜ್ ಮೊದಲಾದವರು ಇದ್ದರು.
Published on
ಬಂಟ್ವಾಳ: ಗ್ರಾಮೀಣ ಕುಡಿಯುವ ನೀರಿನ ಜಲಜೀವನ್ ಮಿಷನ್ ಯೋಜನೆ ಜಿಲ್ಲಾದ್ಯಂತ ಯಶಸ್ವಿಯಾಗಿ ಸಾಕಾರಗೊಳ್ಳುತ್ತಿದ್ದು, ಇದರ ಪೂರ್ಣ ಬಳಕೆಯ ಬಗ್ಗೆ ಪಂಚಾಯಿತಿ ಮಟ್ಟದಲ್ಲಿ ಅರಿವು ಅಗತ್ಯ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ದ.ಕ. ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಜೈಪ್ರಕಾಶ್ ಸಿ. ಹೇಳಿದರು.
ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮಮಟ್ಟದಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಯಾವುದೇ ಸಮಸ್ಯೆ ಸವಾಲುಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಕುಡಿಯುವ ನೀರು ಸಮರ್ಪಕ ಸರಬರಾಜಿಗೆ ಆದ್ಯತೆ ನೀಡಬೇಕು ಎಂದರು.
ಇಲಾಖೆಯ ಎಇಇ ನಟೇಶ್ ಕುಮಾರ್ ಯೋಜನೆ ಕುರಿತಾಗಿ ವಿವರಿಸಿದರು. ಜಲಜೀವನ್ ಮಿಷನ್ ಯಶಸ್ವಿ ನಿರ್ವಹಣೆ, ಜಲ ಅರ್ಪಣ್ ದಿವಸ್, ಕರ್ನಾಟಕ ಸುಸ್ಥಿರ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮದ ಅಡಿಯಲ್ಲಿ ಕಾರ್ಯಾಚರಣೆ ಹಾಗೂ ನಿರ್ವಹಣೆ, ಗ್ರಾಮ ನೀರು ಹಾಗೂ ನೈರ್ಮಲ್ಯ ಸಮಿತಿ ಸಭೆಗಳ ಪ್ರಸ್ತುತಿ, ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮ ಸಹಿತ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಅವಲೋಕನ ನಡೆಯಿತು.
ತಾಲೂಕು ವ್ಯಾಪ್ತಿಯ ವಿವಿಧ ಪಂಚಾಯಿತಿ ಅಧಿಕಾರಿಗಳು ಭಾಗವಹಿಸಿದ್ದರು. ತಾ.ಪಂ. ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ವಿಶ್ವನಾಥ್ ಉಪಸ್ಥಿತರಿದ್ದರು. ಶಿವರಾಮ್ ನಿರೂಪಿಸಿದರು.

ಗ್ರಾಮೀಣ ಭಾಗದಲ್ಲಿ ನೀರಿನ ಮೀಟರ್ ರೀಡಿಂಗ್ ಮಾಡಲು ತಿಳಿಸಬೇಕು. ಕೆಲವೆಡೆ ಬೈಪಾಸ್ ಮಾಡಿ ನೀರು ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಪರಿಶೀಲನೆ ತಂಡ ಆಗಮಿಸಿದಾಗ ಇಂತಹ ಪ್ರಕರಣ ಕಂಡುಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಮೀಟರ್ ರೀಡಿಂಗ್ ಮಾಡಿಸಿ ಪುಸ್ತಕದಲ್ಲಿ ಬರೆದು ನಿಗಾ ವಹಿಸಬೇಕು. ಜಲಜೀವನ್ ಮಿಷನ್ ಹಸ್ತಾಂತರ ಆದ ಬಳಿಕ ಪೂರ್ಣ ಜವಾಬ್ದಾರಿ ಗ್ರಾಮ ಪಂಚಾಯಿತಿಯದ್ದಾಗಿರುತ್ತದೆ.

— ವಿಘ್ನೇಶ್ ರಾಜ್, ಡಿಪಿಎಂ, ಜಲಜೀವನ್ ಮಿಷನ್ ಯೋಜನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net