ಸಾಂಕ್ರಾಮಿಕ ರೋಗಗಳ ಅರಿವು

 ಮಹಿಳಾ ಗ್ರಾಮಸಭೆಯಲ್ಲಿ ವೀಣಾ, ಅನಿತಾ ಕ್ಯಾಥರಿನ್, ಲೊಲಿನೊ ವಿ.ಲೋಬೊ, ರೇವತಿ, ಎಎನ್‌ಎಂ ಮುಮ್ತಾಜ್ ಇದ್ದರು.
ಮಹಿಳಾ ಗ್ರಾಮಸಭೆಯಲ್ಲಿ ವೀಣಾ, ಅನಿತಾ ಕ್ಯಾಥರಿನ್, ಲೊಲಿನೊ ವಿ.ಲೋಬೊ, ರೇವತಿ, ಎಎನ್‌ಎಂ ಮುಮ್ತಾಜ್ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗುರುಪುರ
ಮಳೆಗಾಲದಲ್ಲಿ ಮನೆಯ ಸುತ್ತಲ ಪ್ರದೇಶದಲ್ಲಿ ನೀರು ಜಮೆ ಆಗದಂತೆ ನೋಡಿಕೊಳ್ಳಬೇಕು. ಕೊಳಚೆ ನೀರು ಶೇಖರಣೆ ಜಾಗದಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಡೆಂೆ ಮತ್ತಿತರ ಕಾಯಿಲೆ ಹರಡುತ್ತವೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಗ್ರಾಮೀಣ ಜನರು ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಪಡುಪೆರಾರ ಪಿಎಚ್‌ಸಿ ವ್ಯಾಪ್ತಿಯ ಎಎನ್‌ಎಂ ಮುಮ್ತಾಜ್ ಹೇಳಿದರು.
ಪಡುಪೆರಾರ ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಮಹಿಳಾ ಗ್ರಾಮಸಭೆಯಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಲೊಲೀನಾ ವಿ.ಲೋಬೊ ಮಾತನಾಡಿ, ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಉಚಿತ ಕಾನೂನು ನೆರವು ಲಭ್ಯವಿದೆ. ಕೆಲಸ ಮಾಡುವ ಜಾಗದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಆಂತರಿಕ ಸಮಿತಿಗೆ ದೂರು ನೀಡಲು ಅವಕಾಶವಿದೆ. ಸಮಿತಿ ವಿಚಾರಣೆ ನಡೆಸಿ 60 ದಿನದಲ್ಲಿ ಸೂಕ್ತ ಕ್ರಮ ಜರುಗಿಸುತ್ತದೆ ಎಂದು ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಆಡಳಿತಾಧಿಕಾರಿ ವೀಣಾ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಅನಿತಾ ಕ್ಯಾಥರಿನ್, ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕಸಹಾಯಕಿ(ಎಸ್‌ಡಿಎ) ರೇವತಿ, ಪಡೆಪೆರಾರ ಮತ್ತು ಮೂಡುಪೆರಾರ ಗ್ರಾಮಗಳ ಮಹಿಳೆಯರು, ಪಂಚಾಯಿತಿ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ, ಹಸಿ, ಒಣ ಕಸ ಬೇರ್ಪಡಿಸುವಿಕೆ, ಕಾನೂನು ಉಲ್ಲಂಸುವವರ ಮೇಲೆ ಹದ್ದಿನ ಕಣ್ಣಿಡಲು ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಜರುಗಿಸಲಾಗುವುದು. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಜರುಗಿಸುವಲ್ಲಿ ಸಾರ್ವಜನಿಕರು ಪಂಚಾಯಿತಿಯೊಂದಿಗೆ ಸಹಕರಿಸಬೇಕು.

— ಅನಿತಾ ಕ್ಯಾಥರಿನ್ ಪಿಡಿಒc

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net