ರೋಗ ಬರುವ ಮೊದಲೇ ಜಾಗೃತಿ

 ಗ್ರಾಮೀಣ ದತ್ತಿ ಆರೋಗ್ಯ ಕೇಂದ್ರ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿದರು. ಕಣಚೂರು ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರ ಅಧ್ಯಕ್ಷ ಯು.ಕಣಚೂರು ಮೋನು, ಗೋಲ್ಡನ್ ಹೆಲ್ತ್ ಫೌಂಡೇಶನ್ ಅಧ್ಯಕ್ಷ ಮೂಸಾ ಅಬ್ಬಾಸ್ ಕುರಿಯಕ್ಕಾರ್, ಕೆ.ಎಸ್.ಅಶ್ರಫ್ ಕರ್ನಿರೆ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮೀಣ ದತ್ತಿ ಆರೋಗ್ಯ ಕೇಂದ್ರ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿದರು. ಕಣಚೂರು ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರ ಅಧ್ಯಕ್ಷ ಯು.ಕಣಚೂರು ಮೋನು, ಗೋಲ್ಡನ್ ಹೆಲ್ತ್ ಫೌಂಡೇಶನ್ ಅಧ್ಯಕ್ಷ ಮೂಸಾ ಅಬ್ಬಾಸ್ ಕುರಿಯಕ್ಕಾರ್, ಕೆ.ಎಸ್.ಅಶ್ರಫ್ ಕರ್ನಿರೆ ಮತ್ತಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ನಮ್ಮ ದೇಹ ಪರಿಸರ, ಪ್ರಕೃತಿಗೆ ಹೊಂದಿಕೊಂಡಿದ್ದು, ಪ್ರಕೃತಿಯಿಂದ ಹೊರಬರುವುದು ಕಾಯಿಲೆಗಳಿಗೆ ರಹದಾರಿ. ರೋಗ ಬಂದ ಬಳಿಕ ಔಷಧ ಕೊಡುವ ಬದಲು ಅದಕ್ಕಿಂತ ಮೊದಲೇ ಜಾಗೃತಿ ಮೂಡಿಸುವ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯಬೇಕಿದ್ದು ಪ್ರತಿಯೊಬ್ಬರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಕರೆ ನೀಡಿದರು.
ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಂಸ್ಥೆ ಕಿನ್ಯ ಗೋಲ್ಡನ್ ಹೆಲ್ತ್ ಫೌಂಡೇಶನ್ ವತಿಯಿಂದ ಕಿನ್ಯದಲ್ಲಿ ಭಾನುವಾರ ನಡೆದ ಗ್ರಾಮೀಣ ದತ್ತಿ ಆರೋಗ್ಯ ಕೇಂದ್ರದ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಯುಷ್ ಉಡುಪಿ ಜಿಲ್ಲಾ ವಿಭಾಗ ಮುಖ್ಯ ವೈದ್ಯಾಧಿಕಾರಿ ಡಾ.ಮಹಮ್ಮದ್ ಇಕ್ಬಾಲ್ ಕಿನ್ಯ, ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯೆ ಅಫ್ರಾ ಇಸ್ಮಾಯಿಲ್ ಕಿನ್ಯ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಮುಸ್ತಫಾ ಅನ್ಸಾರಿ ದುವಾ ನೆರವೇರಿಸಿದರು. ಕಣಚೂರು ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರ ಅಧ್ಯಕ್ಷ ಯು.ಕಣಚೂರು ಮೋನು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಗೋಲ್ಡನ್ ಹೆಲ್ತ್ ಫೌಂಡೇಶನ್ ಅಧ್ಯಕ್ಷ ಮೂಸಾ ಅಬ್ಬಾಸ್ ಕುರಿಯಕ್ಕಾರ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕಿನ್ಯ ಮಾತನಾಡಿದರು. ಅಸ್ಸಯ್ಯದ್ ಅಮೀರ್ ತಂಙಳ್ ಅಲ್ ಬುಖಾರಿ ಕಿನ್ಯ, ಅಸ್ಸಯ್ಯದ್ ಶಿಹಾಬ್ ತಂಙಳ್ ಅಲ್ ಬುಖಾರಿ ಕಿನ್ಯ, ಕೆಎಸ್‌ಎ ಎಕ್ಸ್‌ಪರ್ಟೀಸ್ ಸಂಸ್ಥೆ ನಿರ್ದೇಶಕ ಕೆ.ಎಸ್.ಅಶ್ರಫ್ ಕರ್ನಿರೆ, ಉದ್ಯಮಿಗಳಾದ ಅಬ್ದುಲ್ ಹಮೀದ್ ಎಚ್.ಎನ್., ಯು.ಬಿ.ಮಹಮ್ಮದ್ ಉಳ್ಳಾಲ್, ಮಂಜನಾಡಿ ಜಮಾತ್ ಮಾಜಿ ಅಧ್ಯಕ್ಷ ಆಲಿಕುಞ ಪಾರೆ, ಜಿಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ಮಲರಾಯ ಧೂಮಾವತಿ ಬಂಟ ದೈವಸ್ಥಾನ ಪ್ರಧಾನ ಅರ್ಚಕ ರವಿ ಪೂಜಾರಿ, ಎಸ್ ಡಿಪಿಐ ಕ್ಷೇತ್ರ ಅಧ್ಯಕ್ಷ ಜಾಹೀದ್ ಮಲಾರ್, ನಾರಾಯಣಗುರು ಯುವ ಸಂಚಲನ ಅಧ್ಯಕ್ಷ ಜಯಂತ್ ಪೂಜಾರಿ, ಯೇನೆಪೋಯ ವಿವಿ ಶಿಬಿರ ಸಂಯೋಜಕ ರಜಾಕ್, ಇಂಜಿನಿಯರ್ ಇಮ್ರಾನ್, ಮುಂಬೈ ಉದ್ಯಮಿ ಆಸಿಫ್ ಲೋನಾವಾಲ, ಕಿನ್ಯ ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಸಿರಾಜುದ್ದೀನ್ ಕಿನ್ಯ, ಫಾರೂಕ್ ಕಿನ್ಯ, ಗೋಲ್ಡನ್ ಹೆಲ್ತ್ ಫೌಂಡೇಶನ್ ಗೌರವಾಧ್ಯಕ್ಷ ಕೆ.ಎಸ್.ಇಸ್ಮಾಯಿಲ್ ಚಾಯರವಳಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು. ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ ಕಿನ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯರ್ಯದರ್ಶಿ ಅಬ್ದುಲ್ ಖಾದರ್ ಹಳೆಮನೆ ವಂದಿಸಿದರು. ಸಂಚಾಲಕ ಹಮೀದ್ ಕಿನ್ಯ ನಿರೂಪಿಸಿದರು.

ಆಸುಪಾಸಿನ ಗ್ರಾಮದಲ್ಲಿ ಆರೋಗ್ಯ ಕೇಂದ್ರ ಇದ್ದರೂ ಕಿನ್ಯದಲ್ಲಿ ಪ್ರಥಮವಾಗಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಗೋಲ್ಡನ್ ಹೆಲ್ತ್ ಫೌಂಡೇಶನ್ ವತಿಯಿಂದ ಆರೋಗ್ಯ ಕೇಂದ್ರ ನಿರ್ಮಾಣವಾಗುತ್ತಿರುವುದು ಗ್ರಾಮಸ್ಥರ ಪಾಲಿಗೆ ಸಂತಸದ ವಿಚಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net