ನದಿಗೆ ಬಟ್ಟೆ ಎಸೆಯುವುದರ ವಿರುದ್ಧ ಜಾಗೃತಿ

 ಪರಿಸರ ಸ್ವಚ್ಛತಾ ಕಾರ್ಯಕ್ರಮವನ್ನು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಉದ್ಘಾಟಿಸಿದರು. ಪ್ರಮುಖರಾದ ನ.ಸೀತಾರಾಮ, ಡಾ.ಸಂದೀಪ್ ರೈ, ಡಾ.ದಿನೇಶ್ ಕುಮಾರ್ ಕೆ.ಯು. ಮತ್ತಿತರರು ಉಪಸ್ಥಿತರಿದ್ದರು.
ಪರಿಸರ ಸ್ವಚ್ಛತಾ ಕಾರ್ಯಕ್ರಮವನ್ನು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಉದ್ಘಾಟಿಸಿದರು. ಪ್ರಮುಖರಾದ ನ.ಸೀತಾರಾಮ, ಡಾ.ಸಂದೀಪ್ ರೈ, ಡಾ.ದಿನೇಶ್ ಕುಮಾರ್ ಕೆ.ಯು. ಮತ್ತಿತರರು ಉಪಸ್ಥಿತರಿದ್ದರು.
Published on
ಸುಬ್ರಹ್ಮಣ್ಯ: ಆಧುನಿಕ ಯುಗದಲ್ಲಿ ಪರಿಸರ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮೂಢನಂಬಿಕೆಯಿಂದ ಭಕ್ತರು ನದಿಯಲ್ಲಿ ಬಟ್ಟೆಗಳನ್ನು ತೇಲಿಬಿಟ್ಟು ಪರಿಸರ ಮಾಲಿನ್ಯ ಮಾಡುವುದರ ವಿರುದ್ಧ ಜಾಗೃತಿ ಮೂಡಿಸಬೇಕು. ದಿನನಿತ್ಯ ಸಾವಿರಾರು ಭಕ್ತರು ಆಗಮಿಸುವ ಕುಕ್ಕೆ ಸುಬ್ರಹ್ಮಣ್ಯದಂತಹ ಪುಣ್ಯಕ್ಷೇತ್ರದಲ್ಲಿ ನಿತ್ಯ ಸ್ವಚ್ಛತಾ ಅಭಿಯಾನ ಮಾಡುವುದು ಅತ್ಯವಶ್ಯ. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನ್ನಿಧ್ಯ ಇರುತ್ತದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.
ವಿಶ್ವ ಪರಿಸರ ದಿನ ಅಂಗವಾಗಿ ಮಂಗಳೂರಿನ ನಿಟ್ಟೆ ಫಿಸಿಯೋಥೆರಪಿ ಮಹಾವಿದ್ಯಾಲಯ(ಕ್ಷೇಮ) ಆಯೋಜಿಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಳ ಪರಿಸರದಲ್ಲಿ ಕ್ಲೀನ್ ಕುಮಾರಧಾರಾ, ಗ್ರೀನ್ ಸುಬ್ರಹ್ಮಣ್ಯ ಬೃಹತ್ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ಕ್ಷೇಮದ ಡೀನ್ ಡಾ.ಸಂದೀಪ್ ರೈ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ನ.ಸೀತಾರಾಮ, ಪ್ರಸನ್ನ ದರ್ಬೆ, ವನಜಾ ವಿ.ಭಟ್, ಶೋಭಾ ಗಿರಿಧರ್, ಮಾಸ್ಟರ್ ಪ್ಲಾೃನ್ ಸಮಿತಿ ಮಾಜಿ ಸದಸ್ಯ ಮನೋಜ್ ಎಸ್., ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲ ಡಾ.ದಿನೇಶ್ ಕುಮಾರ್ ಕೆ.ಯು., ಪ್ರಾಧ್ಯಾಪಕ ಡಾ.ಪುರುಷೋತ್ತಮ, ಸದಾನಂದ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿಕ್ರಮ ಶೆಟ್ಟಿ, ದಂತ ವೈದ್ಯ ಡಾ.ಚರಣ್ ಶೆಟ್ಟಿ, ಮೇಲ್ವಿಚಾರಕ ತಾರನಾಥ್, ನಿಟ್ಟೆ ಫಿಸಿಯೋಥೆರಪಿ ಕನ್ವೀನರ್ ರಾಕೇಶ್ ಕೃಷ್ಣ, ಕೋಆರ್ಡಿನೇಟರ್ ನಿತ್ಯಲ್ ಕುಮಾರ್, ಫಿಸಿಯೋಥೆರಪಿ ವಿದ್ಯಾರ್ಥಿಗಳು ಇದ್ದರು. ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನಿರೂಪಿಸಿದರು.
ನದಿ ತೀರ ಶುಚಿತ್ವ
ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಮಾರಧಾರಾ ಸ್ನಾನಘಟ್ಟ ಬಳಿ ಹಾಗೂ ಆದಿಸುಬ್ರಮಣ್ಯ ಪರಿಸರದಲ್ಲಿ ನದಿ ಸ್ವಚ್ಛತಾ ಕಾರ್ಯ ನಡೆಸಿದರು. ದೇವಳದ ವತಿಯಿಂದ ಬೆಳಗ್ಗೆ ಉಪಹಾರ, ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net