ಬಿಜೆಪಿ ಬಲ್ಯ ಬೂತ್ ಸಮಿತಿ ಅಧ್ಯಕ್ಷ ಪ್ರಕಾಶ್ ಪಟ್ಟೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್., ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಬಲ್ಯ ಉಮಾಮಹೇಶ್ವರಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಾಮಚರಣ್ ರೈ ಮಾಣಿಗ, ಕಾರ್ಯದರ್ಶಿ ನಾರಾಯಣ ಬಲ್ಯ, ಹೊಸಮಠ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ ಮೊದಲಾದವರು ಇದ್ದರು. ಪುಷ್ಪರಾಜ್ ಬಾರೆತ್ತಡಿ ಸ್ವಾಗತಿಸಿದರು. ಹರೀಶ್ ದೇವತ್ತಡ್ಡ ವಂದಿಸಿದರು. ಧನಂಜಯ ಕೊಡಂಗೆ ನಿರೂಪಿಸಿದರು.