

ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಯುದ್ಧ ಆಗುತ್ತಿದೆ ಎಂಬ ನೆಪವೊಡ್ಡಿ ಅನಗತ್ಯವಾಗಿ ಉದ್ಯಾವರದ ಪಂಪ್ನಲ್ಲಿ ಸಿಎನ್ಜಿ ಗ್ಯಾಸ್ ದರ ಏರಿಕೆ ಮಾಡಿದ್ದಾರೆ. ಓಲ್ಡ್ ಸ್ಟಾಕ್ ಖಾಲಿಯಾಗಿದೆ. ಇದು ಹೊಸ ಸ್ಟಾಕ್. ಈಗ ದರ ಏರಿಕೆ ಆಗಿದೆ ಎಂದು ಪಂಪ್ನ ಮಾಲೀಕರು ತಿಳಿಸುತ್ತಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಆಟೋ ಚಾಲಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಹೆಚ್ಚಿನ ಹಣ ಪಡೆಯುತ್ತಿರುವ ಪಂಪ್ನವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.