ಜೀಪ್ ಡಿಕ್ಕಿಯಾಗಿ ಆಟೋ ಚಾಲಕಗೆ ಗಾಯ

ACCIDENT
ACCIDENT
Published on

ಕುಂದಾಪುರ: ಬಸ್ರೂರು ಗ್ರಾಮದ ಮೆರ್ಡಿ ಎಂಬಲ್ಲಿ ಭಾನುವಾರ ಆಟೋ ರಿಕ್ಷಾಗೆ ಜೀಪ್ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಬಸ್ರೂರು ಗ್ರಾಮದ ಶೇಕ್ ನಿಸಾರ್ ಅಹ್ಮದ್ ಎಂಬುವರು ಗಾಯಗೊಂಡಿದ್ದಾರೆ.

ಅಹ್ಮದ್ ಅವರು ಎಚ್‌ಎಂಟಿ ಕಡೆಯಿಂದ ಬಸ್ರೂರು ಕಡೆಗೆ ಹೋಗುತ್ತಿದ್ದಾಗ ಬಸ್ರೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಜೀಪ್ ಡಿಕ್ಕಿಯಾಗಿದೆ. ಗಾಯಾಳುವನ್ನು ಕುಂದಾಪುರದ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net