ಶಾಲಾಮಕ್ಕಳಿದ್ದ ಆಟೋ ಪಲ್ಟಿ

ACCIDENT
ACCIDENT
Published on
ಕಾಸರಗೋಡು: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಮಗುಚಿಬಿದ್ದ ಪರಿಣಾಮ, ಏಳು ಮಂದಿ ವಿದ್ಯಾರ್ಥಿಗಳು ಮತ್ತು ಚಾಲಕ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು ನಗರದ ಎಂ.ಜಿ.ರಸ್ತೆಯಲ್ಲಿರುವ ಫೋರ್ಟ್ ರೋಡ್ ಜಂಕ್ಷನ್‌ನಲ್ಲಿ ಬುಧವಾರ ಅಪಘಾತ ನಡೆದಿದೆ. ವಿದ್ಯಾರ್ಥಿಗಳಾದ ಆರಾಧ್ಯಾ(12), ಅಥರ್ವ್(6) ಮತ್ತು ಅರ್ವಿನ್(7), ಮರಿಯಮ್(10), ದೀಪ್ತಾ(12), ಅನಶ್ವರಾ(10) ಮತ್ತು ಇಯಾನ್ ಸುನಿಲ್(6) ಹಾಗೂ ಆಟೋ ಚಾಲಕ ಉಮೇಶ್ ಗಾಯಾಳುಗಳು. ವಿದ್ಯಾರ್ಥಿನಿ ರಿಯಾ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾಳೆ. ಗಾಯಾಳುಗಳು ಚೇತರಿಸುತ್ತಿದ್ದಾರೆ. ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net