ದೇಶದ ಆರ್ಥಿಕ ಪ್ರಗತಿಗೆ ಲೆಕ್ಕಪರಿಶೋಧಕರ ಕೊಡುಗೆ ಅಪಾರ

ಉಡುಪಿಯಲ್ಲಿ ಆಯೋಜಿಸಿದ್ದ ಲೆಕ್ಕಪರಿಶೋಧಕರ 'ಸಮುದ್ಯತಿ' ಸಮ್ಮೇಳನವನ್ನು ಅರ್ಪಿತ್​ ಕಬ್ರಾ ಉದ್ಘಾಟಿಸಿದರು. ಪ್ರತೀಕ ಬಾಯಲ್​, ರಾಘವೇಂದ್ರ ಮೊಗೇರಾಯ, ಪ್ರಮೋದ ಹೆಗ್ಡೆ, ಡಾ. ಅಭಿಷೇಕ ಮುರಳಿ, ಅಶ್ವತ್ಥ ಜೆ. ಶೆಟ್ಟಿ, ಡಾ.ಗಿರೀಶ ಅಹುಜಾ, ಪಂಕಜ ಗೋಯಲ್​, ಪ್ರದೀಪ ಜೋಗಿ, ಲೋಕೇಶ ಶೆಟ್ಟಿ, ಕೆ.ಸುರೇಂದ್ರ ನಾಯಕ, ಕೆ.ಲಕ್ಷ್ಮೀಶ ರಾವ್​ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಲೆಕ್ಕಪರಿಶೋಧಕರ 'ಸಮುದ್ಯತಿ' ಸಮ್ಮೇಳನವನ್ನು ಅರ್ಪಿತ್​ ಕಬ್ರಾ ಉದ್ಘಾಟಿಸಿದರು. ಪ್ರತೀಕ ಬಾಯಲ್​, ರಾಘವೇಂದ್ರ ಮೊಗೇರಾಯ, ಪ್ರಮೋದ ಹೆಗ್ಡೆ, ಡಾ. ಅಭಿಷೇಕ ಮುರಳಿ, ಅಶ್ವತ್ಥ ಜೆ. ಶೆಟ್ಟಿ, ಡಾ.ಗಿರೀಶ ಅಹುಜಾ, ಪಂಕಜ ಗೋಯಲ್​, ಪ್ರದೀಪ ಜೋಗಿ, ಲೋಕೇಶ ಶೆಟ್ಟಿ, ಕೆ.ಸುರೇಂದ್ರ ನಾಯಕ, ಕೆ.ಲಕ್ಷ್ಮೀಶ ರಾವ್​ ಇದ್ದರು.
Published on: 

* ಪಿಜಿಎಫ್​ಎಂಸಿ ಉಪಾಧ್ಯಕ್ಷ ಅರ್ಪಿತ್​ ಕಬ್ರಾ ಅಭಿಪ್ರಾಯ

* 'ಸಮುದ್ಯತಿ' ಐಸಿಎಐ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

ಉಡುಪಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ದೇಶದ ಬಲಿಷ್ಠ ಸಂಘಟನೆಗಳಲ್ಲಿ ಒಂದಾಗಿದೆ. ಇದು ಗೌರವಯುತ ಹಾಗೂ ಸಮಾಜಕ್ಕೆ ಅನಿವಾರ್ಯ ವೃತ್ತಿಯಾಗಿದೆ. ಅಲ್ಲದೆ, ಇತರ ವೃತ್ತಿಗಳಿಗಿಂತ ವಿಭಿನ್ನವಾಗಿರುವ ಈ ಕ್ಷೇತ್ರವು ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಲೆಕ್ಕಪರಿಶೋಧಕರಿಗೆ ವಿಪುಲ ಅವಕಾಶಗಳಿವೆ ಎಂದು ಪಿಜಿಎಫ್​ಎಂಸಿ ಉಪಾಧ್ಯಕ್ಷ ಅರ್ಪಿತ್​ ಕಬ್ರಾ ಅಭಿಪ್ರಾಯಪಟ್ಟರು.

ಉಡುಪಿಯ ಅಜ್ಜರಕಾಡು ಟೌನ್​ಹಾಲ್​ನಲ್ಲಿ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ)ಯ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ (ಎಸ್​ಐಆರ್​ಸಿ)ಯ ಉಡುಪಿ ಶಾಖೆಯು ಸಂಸ್ಥೆಯ ಸಾರ್ವಜನಿಕ ಮತ್ತು ಸರ್ಕಾರಿ ಹಣಕಾಸು ನಿರ್ವಹಣಾ ಸಮಿತಿ ಆಶ್ರಯದಲ್ಲಿ 'ರೈಸಿಂಗ್​ ಟುಗೆದರ್​ ಟ್ರಾನ್ಸ್​ಫಾರ್ಮಿಂಗ್​ ಟುಮಾರೋ' ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ಎರಡು ದಿನಗಳ 'ಸಮುದ್ಯತಿ-2026' ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಲಭಿಸುವ ಅವಕಾಶವನ್ನು ಸಮರ್ಥವಾಗಿ ಬಳಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಕಾಲಕ್ಕೆ ತಕ್ಕಂತೆ ಜ್ಞಾನ ಮತ್ತು ಕೌಶಲಗಳನ್ನು ನವೀಕರಿಸಿಕೊಳ್ಳಬೇಕು. ತನ್ಮೂಲಕ ವೃತ್ತಿ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದರು.

ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷ ರಾಘವೇಂದ್ರ ಮೊಗೇರಾಯ ಅಧ್ಯಕ್ಷತೆ ವಹಿಸಿದ್ದರು. ಎಸ್​ಐಆರ್​ಸಿ ಕಾರ್ಯದರ್ಶಿ ಪ್ರಮೋದ ಹೆಗ್ಡೆ, ಎಸ್​ಐಆರ್​ಸಿ ರೀಜನಲ್​ ಕೌನ್ಸಿಲ್​ ಮೆಂಬರ್​ ಡಾ. ಅಭಿಷೇಕ ಮುರಳಿ, ಐಸಿಎಐ ಉಡುಪಿ ಶಾಖೆ ಉಪಾಧ್ಯಕ್ಷ ಅಶ್ವತ್ಥ ಜೆ. ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಸಿಎ ಡಾ.ಗಿರೀಶ ಅಹುಜಾ, ಪಂಕಜ ಗೋಯಲ್​, ಸಮ್ಮೇಳನದ ಸಂಚಾಲಕ ಪ್ರದೀಪ ಜೋಗಿ, ಸಹಸಂಚಾಲಕರಾದ ಲೋಕೇಶ ಶೆಟ್ಟಿ, ಕೆ.ಸುರೇಂದ್ರ ನಾಯಕ ಉಪಸ್ಥಿತರಿದ್ದರು.

ಖಜಾಂಚಿ ಅರ್ಚನಾ ಆರ್​. ಮಯ್ಯ, ಸಿಕಾಸ ಅಧ್ಯಕ್ಷ ಸೋನಿತ್​ ಶೆಟ್ಟಿ ಪರಿಚಯಿಸಿದರು. ಶ್ರೀಧರ ಕಾಮತ, ಸೌಮ್ಯಾ ಕಾಮತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ.ಲಕ್ಷ್ಮೀಶ ರಾವ್​ ವಂದಿಸಿದರು.

ಉದ್ಯಮ, ಕಂಪನಿ, ಸೇವೆ ಹಾಗೂ ವ್ಯಾಪಾರ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಮಹತ್ತರವಾದುದು. ಹೊಸ ಉದ್ಯಮಗಳು ಸ್ಥಾಪನೆಯಾದಾಗ ಅವುಗಳ ಸುಸ್ಥಿರ ಬೆಳವಣಿಗೆ ಮತ್ತು ಪ್ರಗತಿಗೆ ಲೆಕ್ಕಪರಿಶೋಧಕರ ಸಲಹೆ, ಸಹಕಾರ ಅತ್ಯಗತ್ಯ. ದೇಶದ ಆರ್ಥಿಕ ಹಾಗೂ ಔದ್ಯಮಿಕ ಅಭಿವೃದ್ಧಿಗಾಗಿ ಯುವಜನತೆಯನ್ನು ಲೆಕ್ಕಪರಿಶೋಧಕ ವೃತ್ತಿಯತ್ತ ಆಕರ್ಷಿಸಬೇಕಿದೆ.
ಪ್ರತೀಕ ಬಾಯಲ್​. ಜಿಪಂ ಸಿಇಒ.