ಸೀಮೆಎಣ್ಣೆ ಸುರಿದು ಕೊಲೆ ಯತ್ನ

crime
crime
Published on
ಕಾಸರಗೋಡು: ವ್ಯಕ್ತಿಯೊಬ್ಪರನ್ನು ತಡೆದು ನಿಲ್ಲಿಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಶುಕ್ರವಾರ ನಸುಕಿನ ವೇಳೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಮೊಗ್ರಾಲಿನಲ್ಲಿ ನಡೆದಿದೆ. ಅಬ್ದುಲ್ ಗಫೂರ್(45) ಗಾಯಾಳು. ಅವರನ್ನು ಕುಂಬಳೆ ಜಿಲ್ಲಾ ಸಹಕಾರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮೇಸ್ತ್ರಿ ಅಬ್ದುಲ್ ಗಫೂರ್ ನಡೆದುಕೊಂಡು ಹೋಗುತ್ತಿದ್ದಾಗ ಮೊಗ್ರಾಲ್ ರೈಲ್ವೆ ಕೆಳಸೇತುವೆ ಬಳಿ ನಾಲ್ವರು ತಡೆದು ನಿಲ್ಲಿಸಿದ್ದಾರೆ. ಅದರಲ್ಲಿ ಒಬ್ಬಾತ ಅಬ್ದುಲ್ ಗಫೂರ್ ಮೇಲೆ ಸೀಮೆಎಣ್ಣೆ ಸುರಿದಿದ್ದು, ಇನ್ನೊಬ್ಬ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಅಬ್ದುಲ್ ಗಫೂರ್ ಬೊಬ್ಬಿಡುತ್ತಿದ್ದಂತೆ ಆಸುಪಾಸಿನವರು ಬಂದು ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶರವಣನ್, ಲಿಂಗಂ, ಮೇರಿ ಸೇರಿದಂತೆ ನಾಲ್ವರ ತಂಡ ಕೃತ್ಯವೆಸಗಿರುವುದಾಗಿ ಅಬ್ದುಲ್ ಗಫೂರ್ ದೂರಿನಲ್ಲಿ ತಿಳಿಸಿದ್ದಾರೆ. ಅಬ್ದುಲ್ ಗಫೂರ್ ಕಾರ್ಮಿಕರಿಗೆ ಹಣ ನೀಡದ ಕಾರಣಕ್ಕೆ ಕೃತ್ಯ ಎಸಗಿರಬೇಕೆಂದು ಸಂಶಯಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net