ಬಾಕಿ ಅರ್ಜಿ ವಿಲೇವಾರಿಗೆ ಯತ್ನ

 ಕುಂದಾಪುರದ ಮಿನಿ ವಿಧಾನಸೌಧದ ಕೋರ್ಟ್ ಹಾಲ್‌ನಲ್ಲಿ ವಂಡ್ಸೆ ಹೋಬಳಿಯ ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ಸಭೆ ನಡೆಯಿತು. ಪ್ರಮುಖರಾದ ಪ್ರದೀಪ್ ಕುರ್ಡೇಕರ್, ರಾವೇಂದ್ರ ಹೊಸ್ಕಳಿ, ಶ್ರೀನಿವಾಸ ಸೌಡ ಮತ್ತಿತರರಿದ್ದರು.
ಕುಂದಾಪುರದ ಮಿನಿ ವಿಧಾನಸೌಧದ ಕೋರ್ಟ್ ಹಾಲ್‌ನಲ್ಲಿ ವಂಡ್ಸೆ ಹೋಬಳಿಯ ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ಸಭೆ ನಡೆಯಿತು. ಪ್ರಮುಖರಾದ ಪ್ರದೀಪ್ ಕುರ್ಡೇಕರ್, ರಾವೇಂದ್ರ ಹೊಸ್ಕಳಿ, ಶ್ರೀನಿವಾಸ ಸೌಡ ಮತ್ತಿತರರಿದ್ದರು.
Published on

ಕುಂದಾಪುರ: ಅಕ್ರಮ-ಸಕ್ರಮ ಬಗರ್ ಹುಕುಂನಡಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 4 ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿ ಇವೆ. ಇನ್ನು ಮುಂದೆ ಪ್ರತಿ ಶುಕ್ರವಾರ ಸಭೆ ನಡೆಸಿ, ಪ್ರತಿ ವಾರ ಕನಿಷ್ಠ 25 ಅರ್ಜಿ ವಿಲೇವಾರಿ ನಡೆಸಿ, ಮುಂದಿನ 4-5 ತಿಂಗಳಲ್ಲಿ ಅರ್ಹ ಎಲ್ಲ ಅರ್ಜಿ ವಿಲೇವಾರಿಗೆ ಪ್ರಯತ್ನಿಸಲಾಗುವುದು ಎಂದು ಬೈಂದೂರು ಕ್ಷೇತ್ರದ ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಹೇಳಿದರು.

ಕುಂದಾಪುರದ ಮಿನಿ ವಿಧಾನಸೌಧದ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಂಡ್ಸೆ ಹೋಬಳಿಯ ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಚಿವರು ಸಭೆ ನಡೆಸಿ 3 ತಿಂಗಳಲ್ಲಿ ಜಿಲ್ಲೆಯಲ್ಲಿ 50 ಸಾವಿರ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ನಮ್ಮಲ್ಲೂ ಬಾಕಿ ಇರುವ ಬಗರ್ ಹುಕುಂನಡಿ 30-40 ವರ್ಷಗಳಿಂದ ಕೃಷಿ ವಾಡುತ್ತಿರುವ ಜಾಗದ ಹಕ್ಕುಪತ್ರ ಕೊಡಿಸುವ ಕಾರ್ಯ ವಾಡಲಾಗುವುದು. ತಹಸೀಲ್ದಾರ್, ಕಂದಾಯ ನಿರೀಕ್ಷಕರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಾರೆ. ಸಮಸ್ಯೆ ಇದ್ದ ಕಡೆ ಸಮಿತಿಯವರು ಭೇಟಿ ನೀಡುತ್ತೇವೆ. ಯಾವುದೇ ಸಮಸ್ಯೆಯಿದ್ದರೂ ಬಗೆಹರಿಸಲಾಗುವುದು ಎಂದರು.
ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ನಿರೀಕ್ಷಕ ರಾವೇಂದ್ರ ಹೊಸ್ಕಳಿ, ಸಮಿತಿಯ ಶ್ರೀನಿವಾಸ ಸೌಡ, ಹೇವಾ ಆರ್.ಪೂಜಾರಿ, ದಿನೇಶ್ ನಾಯ್ಕ ಹಳ್ಳಿಹೊಳೆ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net