ಹಾರುಬೂದಿಗೆ ಮಣ್ಣು ಸುರಿದು ಮುಚ್ಚಲು ಯತ್ನ

ಪಲಿಮಾರು ಮಟ್ಟು ರಸ್ತೆ ಪ್ರದೇಶದಲ್ಲಿ ಸುರಿದಿರುವ ಕೈಗಾರಿಕಾ ಟಕದ ಹಾರುಬೂದಿಗೆ ಮಣ್ಣು ಹಾಕಿ ಮುಚ್ಚಿರುವುದು.
ಪಲಿಮಾರು ಮಟ್ಟು ರಸ್ತೆ ಪ್ರದೇಶದಲ್ಲಿ ಸುರಿದಿರುವ ಕೈಗಾರಿಕಾ ಟಕದ ಹಾರುಬೂದಿಗೆ ಮಣ್ಣು ಹಾಕಿ ಮುಚ್ಚಿರುವುದು.
Published on
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ನಂದಿಕೂರು ವಿಶೇಷ ಆರ್ಥಿಕ ವಲಯ ಬಳಿಯ ಬಯೋ ಡೀಸೆಲ್, ಪಾಮ್ ಆಯಿಲ್ ಮತ್ತು ಗ್ಲಿಸರಿನ್ ಉತ್ಪಾದನಾ ಘಟಕದವರು ಪಲಿಮಾರು ಮಟ್ಟುವಿನ ಸಾರ್ವಜನಿಕ ರಸ್ತೆ ಬದಿ ಸುರಿದಿದ್ದ ಹಾರುಬೂದಿಯನ್ನು ಪೊಲೀಸರ ಎಚ್ಚರಿಕೆ ಬಳಿಕವೂ ತೆರವು ಮಾಡದೆ ತಾತ್ಕಾಲಿಕವಾಗಿ ಮಣ್ಣುಹಾಕಿ ಮುಚ್ಚುವ ಕಾರ್ಯ ಮಾಡಿದ್ದಾರೆ.
ಈ ಹಿಂದೆ ವಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರೂ ಟಕದಿಂದ ವಾಯುವಾಲಿನ್ಯವಾಗುತ್ತಿದ್ದು, ಸುತ್ತಮುತ್ತಲಿನ ಪರಿಸರದವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪೊಲೀಸ್ ಇಲಾಖೆಗೆ ನೀಡಿದ ದೂರಿನ ಪ್ರತಿಯನ್ನು ಲಗತ್ತಿಸಿ ಸ್ಥಳೀಯರು ಬೂದಿ ವಾದರಿಯನ್ನು ಪರಿಶೀಲಿಸುವಂತೆ ವಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ವಾಡಿದ್ದಾರೆ. ಗ್ರಾಮಸ್ಥರು ಕೂಡ ಖಾಸಗಿ ಪ್ರಯೋಗಾಲಯದ ಮೂಲಕ ಹಾರುಬೂದಿಯನ್ನು ಪರೀಕ್ಷೆಗೊಳಪಡಿಸಲು ಮುಂದಾಗಿದ್ದಾರೆ.

ಅವ್ಯವಾಹತ ಕಟ್ಟಿಗೆ ಸಾಗಟ

ಘಟಕಗಳಿಗೆ ದಿನವೊಂದಕ್ಕೆ 80 ರಿಂದ 100 ಟನ್ ಕಟ್ಟಿಗೆ ಸಾಗಾಟವಾಗುತ್ತಿದ್ದು, ಇದರಿಂದ ಪರಿಸರದಲ್ಲಿ ಅವ್ಯವಾಹತವಾಗಿ ಮರಗಳ ನಾಶವಾಗುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ತೋರಿಕೆಗಷ್ಟೇ ತಪಾಸಣೆ ನಡೆಸಿ ತೆರಳುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟಕದಿಂದ ಪರಿಸರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪಟ್ಟಿ ವಾಡಿ ಪರಿಹಾರ ಕ್ರಮ ಕೈಗೊಳ್ಳುವಂತೆ ಕಂಪನಿಗೆ ವಾಲಿನ್ಯ ನಿಯಂತ್ರಣ ಮಂಡಳಿ ಈ ಹಿಂದೆ ನಿರ್ದೇಶನ ನೀಡಿತ್ತು. ಅದನ್ನು ಉಲ್ಲಂಸಿದಲ್ಲಿ ಟಕ ಏಕೆ ಮುಚ್ಚಬಾರದು ಎಂದೂ ಎಚ್ಚರಿಕೆ ನೀಡಿತ್ತು. ಮಂಡಳಿ ನಿರ್ದೇಶನದ ಮೇರೆಗೆ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದ ಕಂಪನಿ ನಂತರ ದಿನಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದು, ಪರಿಸರ ವ್ಯಾಪ್ತಿಯಲ್ಲಿ ಮತ್ತೆ ದುರ್ವಾಸನೆ ಬೀರುತ್ತಿದೆ. ಇದರಿಂದ ಗ್ರಾಮಸ್ಥರು ಆತಂಕದಲ್ಲಿ ಬದುಕುವಂತಾಗಿದೆ.

ಮಾಹಿತಿ ಪಡೆಯಲಾಗಿದೆ

ಪತ್ರಿಕೆಯಲ್ಲಿ ಪ್ರಕಟವಾದ ವರದಿ ಗಮನಿಸಿದ್ದು, ಗ್ರಾವಾಡಳಿತದಿಂದ ಹಾರುಬೂದಿ ಸುರಿದರುವ ಸ್ಥಳ ಪರಿಶೀಲನೆ ನಡೆಸಲಾಗಿದೆ. ಬೂದಿಯನ್ನು ಸ್ಥಳಾಂತರಿಸಿ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಹೆಜವಾಡಿ ಗ್ರಾಮದ ಖಾಸಗಿ ಜಮೀನಿನವರು ಗೊಬ್ಬರವಾಗಿ ಬಳಕೆಗೆ ಬೂದಿಯನ್ನು ಸಂಗ್ರಹಿಸುತ್ತಿರುವುದಾಗಿ ವಾಹಿತಿ ಪಡೆಯಲಾಗಿದೆ ಎಂದು ಪಲಿವಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಹಾಗೂ ಪಿಡಿಒ ಸತೀಶ್ ವಿಜಯವಾಣಿಗೆ ತಿಳಿಸಿದ್ದಾರೆ.

ಸಾರ್ವಜನಿಕರು ಸಂಚರಿಸುವ ಪ್ರದೇಶದಲ್ಲಿ ಸುರಿದಿರುವ ಬೂದಿ ವಾದರಿಯನ್ನು ಪರೀಕ್ಷೆಗೊಳಪಡಿಸಬೇಕು. ಯಾವುದೇ ಕಾರಣಕ್ಕೂ ಬೂದಿಯನ್ನು ಹೀಗೆ ರಸ್ತೆಬದಿ ಸುರಿಯಬಾರದು. ಟಕದಿಂದ ಹೊರಸೂಸುವ ದುರ್ವಾಸನೆಯಿಂದ ಜನರ ಮೇಲಾಗುತ್ತಿರುವ ದುಷ್ಪರಿಣಾಮ ತಡೆಗೆ ಜಿಲ್ಲಾಡಳಿತ ಹಾಗೂ ವಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net