ಕಾರ್ಕಳ: ಕೆಸರಿನಲ್ಲಿ ಹೂತು ಹೋದ ಲಾರಿಯನ್ನು ಹೊರತೆಗೆಯುವ ವಿಚಾರದಲ್ಲಿ ಜಗಳ ನಡೆದು ವ್ಯಕ್ತಿಗೆ ಹಲ್ಲೆ ನಡೆಸಿದ್ದು, ಗಾಯಗೊಂಡಾತ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಲೂಕಿನ ಕಲ್ಯಾ ನಿವಾಸಿ ಓಬಯ್ಯ ಪೂಜಾರಿ ಎಂಬುವರು ಗುರುವಾರ ಕುಂಟಾಡಿಯಲ್ಲಿ ನಿಂತಿದ್ದಾಗ ಕಲ್ಲು ಕ್ವಾರಿಗೆ ಹೋಗುವ ಲಾರಿಯೊಂದು ಕೆಸರಿನಲ್ಲಿ ಹೂತು ಹೋಗಿದ್ದು, ಅದನ್ನು ತೆಗೆಯುವ ವಿಚಾರದಲ್ಲಿ ಸುರೇಂದ್ರ ರೈ ಮತ್ತು ಓಬಯ್ಯ ಅವರಿಗೆ ಮಾತಿಗೆ ಮಾತು ಬೆಳೆದು ಓಬಯ್ಯ ಅವರಿಗೆ ನಿಂದಿಸಿ ಹಲ್ಲೆ ನಡೆಸಲಾಗಿದೆ.