ಇಸ್ಪೀಟ್ ಅಡ್ಡೆಗೆ ದಾಳಿ, ಓರ್ವ ವಶಕ್ಕೆ

Arrest
Arrest
Published on

ಕಡಬ: ಹಣ ಪಣವಾಗಿಟ್ಟು ಇಸ್ಪೀಟ್ ಆಟವಾಡುತ್ತಿದ್ದ ಸ್ಥಳಕ್ಕೆ ಕಡಬ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಕಡಬ ಠಾಣಾ ವ್ಯಾಪ್ತಿಯ ಹಳೆನೆರೆಂಕಿ ಗ್ರಾಮದ ಕುನ್ನಿಕು ಎಂಬಲ್ಲಿ ಹಣ ಪಣಕ್ಕಿಟ್ಟು ಇಸ್ಪೀಟ್ ಆಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಡಬ ಠಾಣೆ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ದಾಳಿ ನಡೆಸಿದ್ದು, ಅಲ್ಲಿದ್ದ ಕೆಲವರು ಪರಾರಿಯಾಗಿದ್ದಾರೆ.

ಈ ವೇಳೆ ಕಡಬ ಕುದ್ಮಾರು ನಿವಾಸಿ ಗುರುವ (44) ಎಂಬಾತನನ್ನು ವಶಕ್ಕೆ ಪಡೆದು 1,700 ರೂ. ನಗದು, ಇಸ್ಪೀಟ್ ಕಾರ್ಡ್ ಸೇರಿದಂತೆ ಮೂರು ವಾಹನಗಳನ್ನು ಸ್ವಾಧೀನಪಡಿಸಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net