ವಿದ್ವಾಂಸರನ್ನು ಗೌರವಿಸುವುದು ಮಠಾಧೀಶರ ಕರ್ತವ್ಯ

ಉಡುಪಿ ಸಮೀಪದ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 11 ವಿದ್ವಾಂಸರಿಗೆ ವಿದ್ಯೇಶ ತೀರ್ಥ ಶ್ರೀಪಾದರು 'ಅಥರ್ವೋದ್ಭೋಷ' ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಹ್ಲಾದ ಆಚಾರ್ಯ ಕಾನಡೆ, ಆಚಾರ್ಯ ಸೂರ್ಯನಾರಾಯಣ ಉಪಾಧ್ಯಾಯ ಇತರರಿದ್ದರು.
ಉಡುಪಿ ಸಮೀಪದ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 11 ವಿದ್ವಾಂಸರಿಗೆ ವಿದ್ಯೇಶ ತೀರ್ಥ ಶ್ರೀಪಾದರು 'ಅಥರ್ವೋದ್ಭೋಷ' ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಹ್ಲಾದ ಆಚಾರ್ಯ ಕಾನಡೆ, ಆಚಾರ್ಯ ಸೂರ್ಯನಾರಾಯಣ ಉಪಾಧ್ಯಾಯ ಇತರರಿದ್ದರು.
Published on

* ವಿದ್ಯೇಶ ತೀರ್ಥ ಶ್ರೀಪಾದರ ಆಶೀರ್ವಚನ

* ಭಂಡಾರಕೇರಿ ಮಠದಲ್ಲಿ 'ಅಥರ್ವೋದ್ಘೋಷ' ಪ್ರಶಸ್ತಿ ಪ್ರದಾನ

ಉಡುಪಿ: ವಿದ್ವಾಂಸರ ಸಂಖ್ಯೆ ತೀವ್ರ ಕಡಿಮೆಯಾಗುತ್ತಿದ್ದು, ಇರುವವರನ್ನು ಹುಡುಕಿ ಗೌರವಿಸುವುದು ಮತ್ತು ಪ್ರಾಚೀನ ಭಾರತೀಯ ವೇದ ವಿದ್ಯೆ ಪ್ರಸಾರಕ್ಕೆ ಪ್ರೋತ್ಸಾಹಿಸುವುದು ಎಲ್ಲ ಮಠಾಧೀಶರ ಕರ್ತವ್ಯವಾಗಿದೆ. ನಮ್ಮ ಗುರುಗಳಾದ ವಿದ್ಯಾಮಾನ್ಯ ತೀರ್ಥರಿಗೆ ಗೌರವ ಸೂಚ್ಯರ್ಥವಾಗಿ ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ ವಿದ್ವಾಂಸರನ್ನಾಗಿ ರೂಪಿಸಿದ ರಾಷ್ಟ್ರದ 100 ಮಂದಿ ವೇದ ವಿದ್ವಾಂಸರಿಗೆ ಪ್ರಶಸ್ತಿ ನೀಡಲು ನಮ್ಮ ಚಾತುರ್ಮಾಸ್ಯದ ಸಂದರ್ಭದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ನುಡಿದರು.
ಬಾರ್ಕೂರಿನ ಭಂಡಾರಕೇರಿ ಮೂಲ ಮಠದಲ್ಲಿ 47ನೇ ಚಾತುರ್ಮಾಸ್ಯ ನಿರತ ಶ್ರೀಗಳು ಶುಕ್ರವಾರ (ಆ.7) ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಠದ ಪ್ರತಿಷ್ಠಿತ 'ಅಥರ್ವೋದ್ಘೋಷ ವಾಕ್ಪತಿ' ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಆರ್ಟ್​ ಆಫ್​ ಲೀವಿಂಗ್​ ಸಂಸ್ಕೃತ ಪಾಠಶಾಲೆಯ ಉಪನ್ಯಾಸಕ ಪಂಡಿತ್​ ಪ್ರಹ್ಲಾದ ಆಚಾರ್ಯ ಕಾನಡೆ ಅವರಿಗೆ ಪ್ರದಾನಿಸಿ ಆಶೀರ್ವಚನ ನೀಡಿದರು.

10 ವಿದ್ವಾಂಸರಿಗೆ ಸುಗ್ರೀವ, ಸುವ್ರತ ಪ್ರಶಸ್ತಿ

ಮಠದಲ್ಲಿ ಚತುರ್ವೇದ ಪಾರಾಯಣ ಮಹಾಯಜ್ಞ ಸರಣಿಗೆ ಶ್ರೀಗಳು ಸಂಕಲ್ಪ ಮಾಡಿದ್ದು, ಅಥರ್ವಣ ವೇದದ ಶೌನಕ ಶಾಖೆ ಪಾರಾಯಣ ಮತ್ತು ರಾಮಕೃಷ್ಣ ಮಂತ್ರ ಜಪ ಸಂಪನ್ನಗೊಂಡಿದೆ. 9 ದಿನಗಳ ಕಾಲ ಪಾರಾಯಣ ನಡೆಸಿದ ರಾಜ್ಯ ಮತ್ತು ಹೊರ ರಾಜ್ಯದ ವಿದ್ವಾಂಸರಾದ ಕಿರಣ್​ ಆಚಾರ್ಯ, ದಿನೇಶ್​ ಆಚಾರ್ಯ, ಮುಕುಲ್​ ಆಚಾರ್ಯ, ಸಚಿನ್​ ಆಚಾರ್ಯ, ಮಲ್ಹಾರ ಆಚಾರ್ಯ, ದೇವಿದಾಸ್​ ಆಚಾರ್ಯ, ಪದ್ಮನಾಭ ಆಚಾರ್ಯ ಜೋಶಿ ಅವರಿಗೆ 'ಅಥರ್ವೋದ್ಘೋಷ ಸುಗ್ರೀವ ಪ್ರಶಸ್ತಿ, ವಿದ್ವಾಂಸರಾದ ಲಕ್ಷ್ಮೀನಾರಾಯಣ ಭಟ್ಟ, ಸುಬ್ರಹ್ಮಣ್ಯ ಸರಳಾಯ ಅವರಿಗೆ 'ಅಥರ್ವೋದ್ಘೋಷ ಸುವ್ರತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆನೆಗುಡ್ಡೆ ವಿನಾಯಕ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸೂರ್ಯನಾರಾಯಣ ಉಪಾಧ್ಯಾಯ ಮಾತನಾಡಿದರು.
"

ಫಲವತ್ತಾದ ಭೂಮಿಯಲ್ಲಿ ಬಿತ್ತಿದ ಬೀಜ ಉತ್ತಮ ಫಲವನ್ನೇ ನೀಡುತ್ತದೆ. ಅಂತೆಯೇ ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ಪೂರ್ಣಪ್ರಜ್ಞ ವಿದ್ಯಾಪೀಠದ ಮೂಲಕ ಸಾವಿರಾರು ವಿದ್ವಾಂಸರನ್ನು ನಿರ್ಮಿಸಿದ್ದಾರೆ. ಅದಕ್ಕೆಲ್ಲಾ ವಿದ್ಯಾಮಾನ್ಯ ತೀರ್ಥರೇ ಪ್ರೇರಣಾ ಶಕ್ತಿ. ಅಂತಹ ಗುರುಗಳು ತೋರಿದ ಮಾರ್ಗದಲ್ಲಿ ಸಾಗಿದರೆ ಬದುಕು ಸಾರ್ಥಕವಾಗಲಿದೆ.

— ವಿದ್ಯೇಶ ತೀರ್ಥ ಶ್ರೀಪಾದರು. ಭಂಡಾರಕೇರಿ ಮಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net