ಆಸ್ಟ್ರೋ ಮೋಹನ್​ಗೆ 'ಇಪಿಎಸ್​ಎ' ಗೌರವ

ಅಮೆರಿಕದ ಪ್ರತಿಷ್ಠಿತ ಫೋಟೋಗ್ರಾಫಿಕ್​ ಸೊಸೈಟಿ ಆಫ್​ ಅಮೆರಿಕ (ಪಿಎಸ್​ಎ) ಸಂಸ್ಥೆಯ ಎಕ್ಸಲೆನ್ಸ್​-ಇಪಿಎಸ್​ಎ ಗೌರವ ಪದವಿಗಳಿಸಿದ ಉಡುಪಿಯ ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಛಾಯಾಪತ್ರಕರ್ತ ಆಸ್ಟ್ರೋ ಮೋಹನ್​.
ಅಮೆರಿಕದ ಪ್ರತಿಷ್ಠಿತ ಫೋಟೋಗ್ರಾಫಿಕ್​ ಸೊಸೈಟಿ ಆಫ್​ ಅಮೆರಿಕ (ಪಿಎಸ್​ಎ) ಸಂಸ್ಥೆಯ ಎಕ್ಸಲೆನ್ಸ್​-ಇಪಿಎಸ್​ಎ ಗೌರವ ಪದವಿಗಳಿಸಿದ ಉಡುಪಿಯ ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಛಾಯಾಪತ್ರಕರ್ತ ಆಸ್ಟ್ರೋ ಮೋಹನ್​.
Published on

* ಅಮೆರಿಕದ ಪ್ರತಿಷ್ಠಿತ ಪದವಿಗೆ ಭಾಜನ

ಉಡುಪಿ: ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಛಾಯಾಪತ್ರಕರ್ತ ಆಸ್ಟ್ರೋ ಮೋಹನ್​ ಅವರಿಗೆ ಅಮೆರಿಕದ ಪ್ರತಿಷ್ಠಿತ ಫೋಟೋಗ್ರಾಫಿಕ್​ ಸೊಸೈಟಿ ಆಫ್​ ಅಮೆರಿಕ (ಪಿಎಸ್​ಎ) ಸಂಸ್ಥೆಯ ಎಕ್ಸಲೆನ್ಸ್​-ಇಪಿಎಸ್​ಎ ಗೌರವ ಪದವಿ ಲಭಿಸಿದೆ.
ಪಿಎಸ್​ಎ ಸಂಸ್ಥೆಯು ಆಸ್ಟ್ರೋ ಮೋಹನ್​ ಅವರ ಮೂರು ದಶಕಗಳಿಗೂ ಮೀರಿದ ಛಾಯಾಪತ್ರಿಕೋದ್ಯಮದ ಸಾಧನೆ ಗುರುತಿಸಿ ಇಪಿಎಸ್​ಎ ಗೌರವದ ಅಧಿಕೃತ ಪ್ರಮಾಣಪತ್ರ ನೀಡಿ ಗೌರವಿಸಿದೆ. ಇದು ಮೋಹನ್​ ಅವರ ಫೋಟೋಗ್ರಾಫಿ ಪಯಣದಲ್ಲಿ ಮತ್ತೊಂದು ಮಹತ್ವದ ಅಂತಾರಾಷ್ಟ್ರೀಯ ಮೈಲುಗಲ್ಲಾಗಿದೆ.
1934ರಲ್ಲಿ ಸ್ಥಾಪನೆಯಾದ ಫೋಟೋಗ್ರಾಫಿಕ್​ ಸೊಸೈಟಿ ಆಫ್​ ಅಮೆರಿಕ, ಛಾಯಾಗ್ರಹಣದ ಶಿಕ್ಷಣ, ಬೆಳವಣಿಗೆ ಮತ್ತು ಕಲಾತ್ಮಕ ಮೌಲ್ಯಗಳ ಉತ್ತೇಜನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವದ ಪ್ರತಿಷ್ಠಿತ ಛಾಯಾಚಿತ್ರ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆ ನೀಡುವ ಗೌರವ ಪದವಿಗಳು ಅಂತಾರಾಷ್ಟ್ರೀಯು ಛಾಯಾಚಿತ್ರ ವಲಯದಲ್ಲಿ ವಿಶೇಷ ಮನ್ನಣೆ ಪಡೆದಿವೆ.
"

ಪ್ರಶಸ್ತಿ ಗೆಲ್ಲುವುದಷ್ಟೇ ಮುಖ್ಯವಲ್ಲ. ನಿರಂತರತೆ, ತಾಳ್ಮೆ ಮತ್ತು ಛಾಯಾಚಿತ್ರದ ವಸ್ತುವಿನ ಬಗೆಗಿನ ಪ್ರಾಮಾಣಿಕತೆಯೂ ಅಷ್ಟೇ ಮುಖ್ಯ ಎನ್ನುವುದನ್ನು ಈ ಗೌರವ ಮತ್ತೊಮ್ಮೆ ನೆನಪಿಸಿದೆ. ನನ್ನನ್ನು ಪ್ರೋತ್ಸಾಹಿಸಿದ ಪಿಎಸ್​ಎ ಸಂಸ್ಥೆ, ಛಾಯಾಚಿತ್ರ ಪ್ರದರ್ಶನಗಳ ಆಯೋಜಕರು, ತೀರ್ಪುಗಾರರು, ಮಾರ್ಗದರ್ಶಕರು, ಸಂಪಾದಕರು, ಸಹೋದ್ಯೋಗಿಗಳು ಹಾಗೂ ಛಾಯಾಗ್ರಾಹಕ ಮಿತ್ರರಿಗೆ ಕೃತಜ್ಞತೆಗಳು. ನನ್ನ ಪಯಣದ ಪ್ರತಿ ಹೆಜ್ಜೆಯಲ್ಲೂ ಸಹಕರಿಸಿ ಬೆಂಬಲಿಸಿದ ಪತ್ನಿ ಪ್ರವೀಣಾಳಿಗೆ ಈ ಗೌರವ ಅರ್ಪಿಸುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net